ಒಕ್ಕೂಟ ಸರ್ಕಾರದ ಆಯವ್ಯಯವು ರಾಜ್ಯದ ಜನತೆಗೆ ಸಂಪೂರ್ಣವಾಗಿ ನಿರಾಶದಾಯಕವಾಗಿದೆ ಮತ್ತು ಒಟ್ಟಾರೆಯಾಗಿ ಒಂದು ಸಾಮಾನ್ಯ ಬಜೆಟ್.ಇಡೀ ವಿಶ್ವವೇ ಗೊಂದಲಮಯ ವಾತಾವರಣದಲ್ಲಿ ಮುಳುಗಿರುವಂತಹ ಸಂದರ್ಭದಲ್ಲಿ,ದೇಶವನ್ನು ಮುನ್ನೆಡೆಸುವ ಹಾಗೂ ರಕ್ಷಿಸುವ ಯಾವುದೇ ಕ್ರಮಗಳು ಕಂಡುಬರುತ್ತಿಲ್ಲ ಎಂದು ಕೆ ಆರ್ ಎಸ್ ಪಕ್ಷದ ರಾಜ್ಯ ರೈತ ಘಟಕದ ಕಾರ್ಯದರ್ಶಿ ನಿರುಪಾದಿ ಕೆ ಗೋಮರ್ಸಿ ಪತ್ರಿಕೆ ಹೇಳಿಕೆಯನ್ನು ನೀಡಿ ಮಾತನಾಡಿದರು.
ಸಂಕಷ್ಟದ ಸಂದರ್ಭದಲ್ಲಿ, ಸ್ಪಷ್ಟ ಹಾಗು ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲು ಅವಕಾಶವಿರುತ್ತದೆ, ಆದರೆ ಯಾವುದೇ ಸ್ಪಷ್ಟತೆಯಿಲ್ಲದ ಮೇಲ್ಸ್ತರದಲ್ಲಿನ ಘೋಷಣೆಗಳಂತೆ ಬಹುತೇಕ ಕಂಡುಬರುತ್ತಿದ್ದು, ರೈತರ ಆದಾಯ ಹೆಚ್ಚಿಸುವ ಬಗ್ಗೆ ಹಾಗು ಯುವ ಶಕ್ತಿಯ ಬಗ್ಗೆ ಮಾತನಾಡಲಾಗಿದೆ, ಆದರೆ ಉದ್ಯೋಗ ಸೃಷ್ಟಿಯ ಬಗ್ಗೆಯಾಗಲಿ ಅಥವಾ ರೈತರ ಸಮಸ್ಯೆ ಬಗೆಹರಿಸಲು ಯಾವುದೇ ನಿರ್ಧಿಷ್ಟ ಕ್ರಮಗಳು ಕಂಡುಬರುತ್ತಿಲ್ಲ. ಈ ಹಿಂದಿನ ಅನೇಕ ಘೋಷಣೆಗಳು ಕೇವಲ ಘೋಷಣೆಗಳಾಗಿ ಮಾತ್ರ ಉಳಿದಿವೆ. ಘೋಷಣೆಗಳನ್ನು ಕಾರ್ಯಗತ ಮಾಡಲು ಸಂಪೂರ್ಣ ನಿರ್ಲಕ್ಷ ವಹಿಸಲಾಗಿದೆ. ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವಂತಹ ರೀತಿಯಲ್ಲಿ ಬಜೆಟ್ ಇದ್ದು, ರಾಜ್ಯದ ಜನರ ನಿರೀಕ್ಷೆಯನ್ನು ಸಂಪೂರ್ಣವಾಗಿ ಹುಸಿಗೊಳಿಸಿದ್ದು,

