ಮಾನ್ವಿ : ಪಟ್ಟಣದ ಕಾಕತೀಯ ಶಿಕ್ಷಣ ಸಂಸ್ಥೆಯ ಕಾಕತೀಯ ಶಾಲಾ ಆವರಣದಲ್ಲಿ ನಡೆದ 30ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಕಲ್ಮಠ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸಿ ಮಾತನಾಡಿ, ಕಾಕತೀಯ ಶಿಕ್ಷಣ ಸಂಸ್ಥೆಯು ಈ ಭಾಗದ ವಿದ್ಯಾರ್ಥಿಗಳಿಗೆ ಅಂಗ್ಲ ಮಾಧ್ಯಮವನ್ನು ಪರಿಚಯಿಸಿ ಕಳೆದ 30 ವರ್ಷಗಳಿಂದ ಗುಣಮಟ್ಟದ ಶಿಕ್ಷಣವನ್ನು ನೀಡುತ್ತ ಬಂದಿದೆ ಎಂದು ಹೇಳಿದರು. ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಆತ್ಮಸ್ಥೈರ್ಯ, ಧೈರ್ಯ ಮತ್ತು ಜೀವನದಲ್ಲಿ ಮುನ್ನಡೆಯಬೇಕೆನ್ನುವ ಆತ್ಮವಿಶ್ವಾಸವನ್ನು ಮೂಡಿಸುವ ಕಾರ್ಯ ನಡೆಯಬೇಕು ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಉತ್ತಮ ಪಾಲಕರಿಗೆ ಸನ್ಮಾನ ಮಾಡಲಾಯಿತು. ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ಮೂಲಕ ಕಾರ್ಯಕ್ರಮವು ಗಮನ ಸೆಳೆಯಿತು. 10ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ 624 ಅಂಕಗಳನ್ನು ಪಡೆದ ವರ್ಷ ಮೇಟಿ ಅವರಿಗೆ ಬಂಗಾರದ ಪದಕ ನೀಡಿ ವಿಶೇಷವಾಗಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯಾಧೀಶರಾದ ಶಿವರಾಜ ವಿ.ಸಿದ್ದೇಶ್ವರ, ತಹಶೀಲ್ದಾರ್ ಭೀಮರಾಯ ಬಿ.ರಾಮಸಮುದ್ರ, ತಾಲೂಕು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ರಾಜಾ ಸುಭಾಷಚಂದ್ರ ನಾಯಕ, ಡಾ. ಸ್ನೇಹಲತಾ ಬೆಟ್ಟದೂರು, ಕಾಕತೀಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಗೊಡವರ್ತಿ ಸತ್ಯನಾರಾಯಣ, ಉಪಾಧ್ಯಕ್ಷರಾದ ಮನ್ನೆ ಉದಯ್ ಭಾಸ್ಕರ್ ರಾವ್, ಕಾರ್ಯದರ್ಶಿ ಗೊಡವರ್ತಿ ಶ್ರೀನಿವಾಸರಾವು, ಚದಲವಾಡ ಸುಬ್ಬರಾವ್, ತಾಳ್ಳೂರಿ ರಾಮಕೃಷ್ಣ, ಜಾಲಾದಿ ಪ್ರಭಾಕರ, ವೇಮೂರಿ ನಾಗೇಶ್ವರರಾವ್, ಬೊಪ್ಪನ ಪಣೇಂದ್ರಕುಮಾರ, ವೇಗುಳ್ಳ ಸುರೇಶ, ಕೊಡವಟಿ ಶ್ರೀನಿವಾಸ, ಚಿಲಕೂರಿ ಪ್ರಸಾದ್ ರಾವ್, ಶಾಲೆಯ ಮುಖ್ಯಗುರು ವೀರಭದ್ರಗೌಡ ಕೆ., ಮುಖಂಡರಾದ ಎಸ್.ಸುಬ್ರಮಣ್ಯಂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


