ತಿಂತೀಣಿ: ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ತಿಂಥಣಿ ಬ್ರಿಜ್ ಶಾಖಾ ಮಠಕ್ಕೆ ಆಗಮಿಸಿ ಬ್ರಹ್ಮಲೀನರಾದ ಪರಮಪೂಜ್ಯ ಶ್ರೀ ಸಿದ್ದರಾಮಾನಂದಪುರಿ ಸ್ವಾಮೀಜಿಯವರ ಗದ್ದುಗೆಗೆ ಪುಷ್ಪನಮನ ಸಲ್ಲಿಸಿ ನುಡಿನಮನದ ವೇದಿಕೆಗೆ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಆಗಮಿಸಿದ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಪರಿಷತ್ತಿನ ಸಭಾ ನಾಯಕರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್ ಎಸ್ ಬೋಸುರಾಜು ಜೀ ಅವರು. ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ಜಗದ್ಗುರು ಶ್ರೀ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಯವರ ದಿವ್ಯ ಸಾನಿದ್ಯದಲ್ಲಿ ನಡೆಯುತ್ತಿರುವ ನುಡಿ ನಮನ ಕಾರ್ಯಕ್ರಮ ಮತ್ತು ಪುಣ್ಯಾರಾಧನೆಯಲ್ಲಿ ಸಚಿವರುಗಳಾದ ಶರಣಪ್ರಕಾಶ್‌ ಪಾಟೀಲ್, ಶಿವರಾಜ್ ತಂಗಡಗಿ, ಮಾಜಿ ಸಚಿವರಾದ ಬಂಡೆಪ್ಪ ಕಾಂಶೆಂಪುರ್, ಶಾಸಕರಾದ ಭೀಮ್ ಸೇನ್ ಚಿಮ್ಮನಕಟ್ಟಿ ಹಾಗೂ ಹಲವಾರು ಶಾಸಕರು, ಮುಖಂಡರುಗಳು ಮತ್ತು ಸ್ವಾಮೀಜಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *