ನಗರದ ಹಿರೇಜಂತಕಲ್ ಪಂಪ ವಿರೂಪಾಕ್ಷೇ ಶ್ವರ ದೇವಸ್ಥಾನ ಜಾತ್ರಾ ಮಹೋತ್ಸದ ನಿಮಿತ್ತ ಶುಕ್ರವಾರ ನಡೆದ ಹಿರೇಜಂತಕಲ್ ಪ್ರೀಮಿಯರ್ ಲೀಗ್ -06ನೇ ಆವೃ ತ್ತಿಯ ಫೈನಲ್ ಪಂದ್ಯಾವಳಿಯಲ್ಲಿ ಜಂತಕಲ್ ವಾರಿಯ ರ್ಸ್ ತಂಡ ದಿ.ಅವೆಂಜರ್ಸ್ ತಂಡ ವಿರುದ್ದ 5ರನ್ ಗಳಿಂದ ಜಯ ಸಾಧಿಸಿತು.ಹಿರೇಜಂತಕಲ್ ಪಂಪ ವಿರೂಪಾಕ್ಷೇಶ್ವರ ದೇವಸ್ಥಾನ ಜಾ ತ್ರಾ ಮಹೋತ್ಸದ ನಿಮಿತ್ತ 32ನೇ ವಾರ್ಡಿನಲ್ಲಿ ಪ್ರತಿ ವರ್ಷ ದಂತೆ ಈ ವರ್ಷವು ಸಹ ಹಿರೇಜಂತಕಲ್ ಪ್ರೀಮಿಯರ್ ಲೀ ಗ್ ಆಡಿಸಲಾಗಿತ್ತು.ಈ ಲೀಗ್ ನಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದು, ಪ್ರತಿ ಪಂದ್ಯಾವಳಿ 7 ಒವರ್ ಗಳ ಆಟ ವಾಗಿರುತ್ತದೆ.ಎಲ್ಲ ಪಂದ್ಯಗಳ ಮುಕ್ತಾಯದ ನಂತರ ಫೈನಲ್ ಪಂದ್ಯಕ್ಕೆ
ಜಂತಕಲ್ ವಾರಿಯರ್ಸ್ ಮತ್ತು ದಿ.ಅವೆಂಜರ್ಸ್ ತಂಡ ಲಗ್ಗೆ ಇಟ್ಟಿತ್ತು. ಪೈನಲ್ ಪಂದ್ಯದಲ್ಲಿ 7 ಒವರ್ ಗಳ ಮುಕ್ತಾ ಯಕ್ಕೆ ಜಂತಕಲ್ ವಾರಿಯರ್ಸ್ ತಂಡ 54ರನ್ ಗಳಿಸಿತು. ಗುರಿ ಬೆನ್ನಟ್ಟಿದ ದಿ.ಅವೆಂಜರ್ಸ್ ತಂಡ 7 ಒವರ್ ಮುಕ್ತಾ ಯಕ್ಕೆ 6 ವಿಕೆಟ್ ನಷ್ಟದೊಂದಿಗೆ 48ರನ್ ಗಳಿಸಿ, ಸೋಲು ಒಪ್ಪಿಕೊಂಡಿತು‌. ಪ್ರಥಮ ಸ್ಥಾನ ಪಡೆದ ಜಂತಕಲ್ ವಾರಿ ಯರ್ಸ್ ತಂಡಕ್ಕೆ ₹30 ಸಾವಿರ ನಗದು, ಟ್ರೋಫಿ ನೀಡಲಾ ಯಿತು. ದ್ವೀತಿಯ ಸ್ಥಾನ ಪಡೆದ ದಿ.ಅವೆಂಜರ್ಸ್ ಹಾಗೂ ತೃತಿಯ ಸ್ಥಾನ ಪಡೆದ ರಾಯಲ್ ಕಿಂಗ್ಸ್ ತಂಡಗಳಿಗೆ ಟ್ರೋ ಫಿ ಮಾತ್ರ ನೀಡಲಾಯಿತು. ಈ ಲೀಗ್ ನಲ್ಲಿ 151ರನ್ ಕಲೆ ಹಾಕಿದ ಕಿರಣ್ ಅತ್ಯುತ್ತಮ ಬ್ಯಾಟ್ಸ್ಮನ್, 16 ವಿಕೆಟ್ ಪಡೆದ ಯುವರಾಜ್ ಅತ್ಯುತ್ತಮ ಬೌಲರ್ ಆಗಿ ಹೊರಹೊಮ್ಮಿ ಬಹುಮಾನ ಸ್ವೀಕರಿಸಿದ್ದಾರೆ. ಶಿವು ಗೋಟೂರ, ರವಿತೇಜ, ಸುನೀಲ ಕುಮಾರ ಆರತಿ, ಹಿರಿಯ ಆಟಗಾರ ಜಿ.ನಾಗರಾಜ, ಶರಣಪ್ಪ, ಹುಲ್ಲೇಶ ಮುಂಡಸ್ತ್, ಆರತಿ ಮಂಜುನಾಥ, ಹುಲಿಯ ಕೋಟೆ, ಸಂ ತೋಷ, ರಮೇಶ ತೆಕ್ಕಲಕೋಟೆ, ಸುರೇಶ ಲಾಕಿ, ಸೂರಿ, ಮೈಬೂ, ಸಲೀಂ ಸೇರಿ ಆಟಗಾರರು, ಪ್ರೇಕ್ಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *