ಮಸ್ಕಿ : ಮಸ್ಕಿಯ ಕನ್ನಡ ಉಪನ್ಯಾಸಕ ದೇವರಾಜ್ ಭಂಡಾರಿ ಗುಲ್ಬರ್ಗ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ವಿಭಾಗದಿಂದ ಡಾ. ನಾಗಪ್ಪ ಟಿ ಯೋಗಿ ಇವರ ಮಾರ್ಗದರ್ಶನದಲ್ಲಿ ಕಾದಂಬರಿಗಳಲ್ಲಿ ಪ್ರಭುತ್ವ ಮತ್ತು ಪ್ರತಿರೋಧಕ ನೆಲೆಗಳು (ಹೈದರಾಬಾದ್ ಕರ್ನಾಟಕ)ಎಂಬ ಕನ್ನಡ ಭಾಷಾ ವಿಭಾಗದಲ್ಲಿ ಮಹಾ ಪ್ರಬಂಧವನ್ನು ಮಂಡಿಸಿದ್ದ ಹಿನ್ನೆಲೆಯಲ್ಲಿ ಜ 27 ರಂದು ಕಲ್ಬುರ್ಗಿ ವಿಶ್ವವಿದ್ಯಾಲಯವು ಪಿ ಎಚ್ ಡಿ ಪದವಿಯನ್ನು ಅಂಗೀಕರಿಸಿದೆ. ಮಾರ್ಚಿನಲ್ಲಿ ನಡೆಯುವ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಿ ಎಚ್ ಡಿ ಪದವಿ ಪಡೆಯಲಿದ್ದಾರೆ. ಮಸ್ಕಿ ತಾಲೂಕಿನ ಕಾಲೇಜು ಉಪನ್ಯಾಸಕರು,ಶಿಕ್ಷಕರು,ಇವರ ಗೆಳೆಯರ ಬಳಗ ಮತ್ತು ಶ್ರೀ ಬಸವೇಶ್ವರ ಸಂಯುಕ್ತ ಪ್ರೌಢ ಶಾಲೆ ಹಾಗೂ ಮುಖ್ಯ ಗುರುಗಳಾದ ಶ್ರೀ ಅಮರನಾಥ್ ಹಳ್ಳೂರ ಅವರು ಅಭಿನಂದಿಸಿದ್ದಾರೆ

