ರಾಯಚೂರು ಜನವರಿ 31 (ಕರ್ನಾಟಕ ವಾರ್ತೆ): ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಜ್ಯೋತಿ ರಥಯಾತ್ರೆಗೆ ಫೆ.1ರಂದು ಬೆಳಗ್ಗೆ 10 ಗಂಟೆಗೆ ನಗರದ ಐತಿಹಾಸಿಕ ಕರ್ನಾಟಕ ಸಂಘದ ಆವರಣದಿಂದ ಚಾಲನೆ ಸಿಗಲಿದೆ.
ಮೇಲಧಿಕಾರಿಗಳಿಂದ ಸೂಚನೆ: ಜಿಲ್ಲೆಯ ಪ್ರತಿಯೊಂದು ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಜ್ಯೋತಿ ರಥಯಾತ್ರೆಯಲ್ಲಿ ಭಾಗಿಯಾಗಲು ಆಯಾ ಕಚೇರಿಯ ಮೇಲಧಿಕಾರಿಗಳು ಕಚೇರಿ ಆದೇಶ ಹೊರಡಿಸಿ ತಮ್ಮ ತಮ್ಮ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದರಿಂದಾಗಿ ಬೇರೆ ಬೇರೆ ಇಲಾಖೆಗಳ ಕಚೇರಿಗಳಲ್ಲಿ ಕಚೇರಿ ಆದೇಶ ಜಾರಿ ಮಾಡಿ ಕ್ರಮವಹಿಸಲಾಗಿದೆ.
ಆಯುಕ್ತರಿಂದ ಕಚೇರಿ ಆದೇಶ: ಮಹಾನಗರ ಪಾಲಿಕೆಯ ಕರವಸೂಲಿಗಾರರು, ಎಸ್‌ಎಚ್‌ಜಿ ಕರವಸೂಲಿಗಾರರು, ತಮ್ಮ ಪ್ಯಾಕೇಜನಿಂದ ತಲಾ 20 ಜನ ಪೌರ ಕಾರ್ಮಿಕರನ್ನು ಕರೆ ತರಲು ಮತ್ತು ಎಲ್ಲ ಸಮುದಾಯ ಸಂಘಟಕರನ್ನು ಕರೆ ತರಬೇಕು ಎಂದು ಮಹಾನಗರ ಪಾಲಿಕೆಯ ಆಯುಕ್ತರು ಕಚೇರಿ ಆದೇಶದ ಮೂಲಕ ಪಾಲಿಕೆಯ ಕಂದಾಯ ಅಧಿಕಾರಿಗಳು, ಕಚೇರಿ ವ್ಯವಸ್ಥಾಪಕರು, ಹಿರಿಯ ಕಿರಿಯ ಆರೋಗ್ಯ ನಿರೀಕ್ಷಕರಿಗೆ ಸೂಚನೆ ನೀಡಿದ್ದಾರೆ.
ಹಾಜರಾತಿ ಸಲ್ಲಿಸಲು ಸೂಚನೆ: ಜಿಲ್ಲೆಯ ಎಲ್ಲಾ ಮುಖ್ಯ ಅಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕಾರ್ಯಾಲಯದ ಸಿಬ್ಬಂದಿಯೊAದಿಗೆ ತಪ್ಪದೆ ಬೆಳಿಗ್ಗೆ 10 ಗಂಟೆಗೆ ಹಾಜರಿರಬೇಕು ಹಾಗೂ ಕಾರ್ಯಕ್ರಮದ ನಂತರ ಹಾಜರಾತಿಯನ್ನು ಕಡ್ಡಾಯವಾಗಿ ಕಾರ್ಯಾಲಯಕ್ಕೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.


