ರಾಯಚೂರು ಜನವರಿ 31 (ಕರ್ನಾಟಕ ವಾರ್ತೆ): ನಗರದ ರೇಸ್ ಕಾನ್ಸೆಪ್ಟ್ ಶಾಲೆ ಮತ್ತು ನವೋದಯ ಮೆಡಿಕಲ್ ಕಾಲೇಜ್‌ನಲ್ಲಿ ಜನವರಿ 31ರಂದು ಎಡೆದೊರೆ ನಾಡು ರಾಯಚೂರು ಉತ್ಸವ–2026ದ ಪ್ರಚಾರ, ಜಾಹೀರಾತು ಮತ್ತು ಮಾಧ್ಯಮ ಸಮಿತಿಯಿಂದ ಪ್ರಚಾರ ಕಾರ್ಯ ನಡೆಯಿತು.
ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿ ಮತ್ತು ಪ್ರಚಾರ ಸಮಿತಿಯ ಸದಸ್ಯರಾದ ಸದಾಶಿವಪ್ಪ ಅವರು ಉತ್ಸವದ ಮಹತ್ವದ ಕುರಿತು ಮಾತನಾಡಿ, ಫೆಬ್ರವರಿ 5, 6 ಮತ್ತು 7ರಂದು ನಡೆಯಲಿರುವ ಉತ್ಸವದಲ್ಲಿ ವಿದ್ಯಾರ್ಥಿಗಳು ಪಾಲಕರ ಜೊತೆಗೂಡಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉತ್ಸವವನ್ನು ಯಶಸ್ವಿಗೊಳಿಸಬೇಕು. ರಾಯಚೂರು ಜಿಲ್ಲೆಯಲ್ಲಿ ಬಹಳಷ್ಟು ವರ್ಷಗಳ ನಂತರ ಉತ್ಸವ ನಿಗದಿಯಾಗಿದೆ. ಜನರು ಸ್ವಯಂ ಪ್ರೇರಣೆಯಿಂದ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಕೋರಿದರು.
ಈ ಕಾರ್ಯಕ್ರಮದಲ್ಲಿ ಶಾಲೆಯ ನಿರ್ದೇಶಕರಾದ ಶಾರದಾದೇವಿ, ಪ್ರಿನ್ಸಿಪಾಲ್ ಭಾವನಾ ಹಾಗೂ ಶಾಲೆಯ ಎಲ್ಲ ಸಿಬ್ಬಂದಿ ಮತ್ತು ಪ್ರಚಾರ ಸಮಿತಿಯ ಸದಸ್ಯರಾದ ನಾಗರಾಜ್ ಅವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *