ಮಸ್ಕಿ ಜ 29 : ಹೈನುಗಾರಿಕೆ ನಿರಂತರ (ನಿಖರ) ಆದಾಯದ ಮೂಲವಾಗಿದೆ. ಅದಕ್ಕಾಗಿ ಮಹಿಳೆಯರು ಹಾಲಿನ ಸಂಘಗಳನ್ನು ಸ್ಥಾಪಿಸಿಕೊಂಡು ಆರ್ಥಿಕ ಸ್ವಾವಲಂಬನೆ ಹೊಂದಬೇಕಾಗಿದೆ. ಸಬ್ಸಿಡಿ ದರದಲ್ಲಿ ದೊರೆಯುವ ಉತ್ತಮ ತಳಿಯ ರಾಸುಗಳನ್ನು ಖರೀದಿಸಿ ಅವುಗಳ ಆರೋಗ್ಯ ಮತ್ತು ಆಹಾರದ ಬಗ್ಗೆ ಕಾಳಜಿವಹಿಸುವಂತೆ ತಿಳಿಸಿ, ವೈಜ್ಞಾನಿಕ ಆಹಾರ ಪದ್ದತಿ ಅನುಸರಿಸಿ ಸರಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿ ಅಧಿಕ ಹಾಲು ಉತ್ಪಾದನೆಯ ಗುರಿ ಹೊಂದುವAತೆ ಮಸ್ಕಿ ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಅಮರೇಶ ಯಾದವ ತಿಳಿಸಿದರು
ಅವರು ಮಸ್ಕಿ ತಾಲೂಕು ಪಂಚಾಯತ್ ಕಛೇರಿ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ರಾಯಚೂರು ಜಿಲ್ಲಾ ಸಹಕಾರ ಒಕ್ಕೂಟ, ರಾಯಚೂರು-ಬಳ್ಳಾರಿ-ಕೊಪ್ಪಳ-ವಿಜಯನಗರ ಜಿಲ್ಲಾ ಸಹಕಾರ ಹಾಲು ಒಕ್ಕೂಟ, ರಾಯಚೂರು-ಕೊಪ್ಪಳ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿ., ಮಸ್ಕಿ ಶಾಖೆ, ಸಹಕಾರ ಇಲಾಖೆ, ತಾಲೂಕು ಪಂಚಾಯತ್ ಮಸ್ಕಿ ಹಾಗೂ ಮಸ್ಕಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳು ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಸ್ಕಿ ತಾಲೂಕಿನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಏರ್ಪಡಿಸಿದ ವಿಶೇಷ ಕಾರ್ಯಕ್ರಮ ಉದ್ಘಾಸಿ ಮಾತನಾಡಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಯಚೂರು ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಶಶಿಧರ ಪಾಟೀಲ ಇವರ ಅನುಪಸ್ಥಿತಿಯಲ್ಲಿ ಕೆ.ಎಂ.ಎಫ್ ಹಾಲು ಒಕ್ಕೂಟದ ನಿರ್ದೇಶಕ ಅಮರಗುಂಡಪ್ಪ ವಹಿಸಿ ಸಹಕಾರ ಪಿತಾಮಹ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ ತಾಲೂಕಿನ ಪ್ರತಿ ಗ್ರಾಮದಲ್ಲಿ ನೂತನ ಹಾಲಿನ ಸಂಘಗಳಿದ ಮುಂದಿನ ದಿನಗಳಲ್ಲಿ ಪ್ರತಿ ದಿನ ೫೦ ಸಾವಿರ ಲೀಟರ್ ಹಾಲು ಉತ್ಪಾದನೆಯ ಗುರಿ ಹೊಂದಿರುವ ಬಗ್ಗೆ ತಿಳಿಸಿ, ಇದಕ್ಕೆ ಬೇಕಾದ ಪಶು ಆಹಾರವನ್ನು ಸಬ್ಸಿಡಿ ದರದಲ್ಲಿ ಕೆ.ಎಂ.ಎಫ್. ಒಕ್ಕೂಟದಿಂದ ಒದಗಿಸುವುದಾಗಿ ತಿಳಿಸಿದರು.
ಮಸ್ಕಿ ತಾಲೂಕು ಪಂಚಾಯತ್ ಸಹಾಯಕ ನಇರ್ದೇಶಕ ಸೋಮನಗೌಡ ಪಾಟೀಲ ಮಾತನಾಡಿ ತಾಲೂಕು ಪಂಚಾಯತಿಯಿAದ ಸಹಕಾರ ಸಂಘಗಳಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿ, ಕೇವಲ ಸಬ್ಸಿಡಿ ಪಡೆಯುವ ಉದ್ಧೇಶದಿಂದ ಸಂಘಗಳನ್ನು ರಚಿಸಿಕೊಳ್ಳಬೇಡಿ, ತಮ್ಮ ಭವಿಷ್ಯದ ಆರ್ಥಿಕತೆಯ ಅನುಕೂಲಕ್ಕಾಗಿ ಸ್ಥಾಪಿಸಿಕೊಳ್ಳುವಂತೆ ಸಲಹೆ ನೀಡಿದರು.
ಡಾ|| ಮಲ್ಲಿಕಾರ್ಜುನ ಹೆಚ್ಚ ಕಮತಗಿ ಸಹಕಾರ ಇಲಾಖೆ (ಎ.ಆರ್.ಸಿ.ಎಸ್. ಕಛೇರಿ) ಸಿಂಧನೂರು ಇವರು ಸಹಕಾರ ಕ್ಷೇತ್ರ ಬೆಳೆದು ಬಂದ ದಾರಿ, ಕೃಷಿಯಲ್ಲಿ ಉಪಕಸಬುಗಳ ಅಳವಡಿಕೆ, ಉದ್ಯೋಗ ಸೃಷ್ಠಿಸಿಕೊಂಡು ಲಾಭದ ಜೀವನ ನಡೆಸುವಂತೆ ತಿಳಿಸಿ, ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಹಕ್ಕು, ಕರ್ತವ್ಯ ಹಾಗೂ ಜವಾಬ್ದಾರಿಗಳ ಕುರಿತು ಉಪನ್ಯಾಸ ನೀಡಿದರು.
ಡಾ|| ದೇವಣ್ಣ ಪಶು ವೈದ್ಯರು ಕೆ.ಎಂ.ಎಫ್. ಹಾಲು ಒಕ್ಕೂಟ ಬಳ್ಳಾರಿ ಇವರು ಪಶು ಆಹಾರ, ಗುಣಮಟ್ಟದ ಮತ್ತು ಅಧಿಕ ಹಾಲಿನ ಉತ್ಪಾದನೆಗೆ ಉತ್ತೇಜನ, ರಾಸುಗಳ ನಿರ್ವಹಣೆ, ಕರುಗಳ ಲಾಲನೆ-ಪಾಲನೆ ಹಾಗೂ ಹೈನುಗಾರಿಕೆ ಮಹತ್ವ ಕುರಿತು ತಮ್ಮ ವಿಶೇಷ ಉಪನ್ಯಾಸ ತಿಳಿಸಿದರು.
ರೇಖಾ ಕೃಷಿಸಖಿ ಗ್ರಾಮ ಪಂಚಾಯತಿ ತಲೇಖಾನ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಜಿಲ್ಲಾ ಸಹಕಾರ ಒಕ್ಕೂಟದ ಜಿಲ್ಲಾ ಸಹಕಾರ ಶಿಕ್ಷಕರಾದ ಕು|| ಅಶ್ವಿನಿ ಕೆ. ಸ್ವಾಗತಿಸಿದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಗಾಯತ್ರಿ ವೈ. ಮಾತನಾಡಿದರು. ಜಿಲ್ಲಾ ಸಹಕಾರ ಶಿಕ್ಷಕರಾದ ನಿರೂಪಿಸಿದರೆ ಒಕ್ಕೂಟದ ವ್ಯವಸ್ಥಾಪಕ ಮಲ್ಲಿಕಾರ್ಜುನ ಎಂ. ಅಮ್ಮಿನಭಾವಿ ವಂದಿಸಿದರು.
ತರಬೇತಿ ಕಾರ್ಯಕ್ರಮದಲ್ಲಿ ಮಸ್ಕಿ ತಾಲೂಕಿನ ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಕೃಷಿ ಮಖಿ ಹಾಗೂ ಪಶು ಸಖಿಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಆಯ್ದ ಸಂಘಗಳಿಗೆ ನಾರಿ ಕ್ಲಿಪ್ ಯೋಜನೆಯಲ್ಲಿ ಸಮೀಕ್ಷೇದಾರರಿಗೆ ನಾರಿ ಕಿಟ್ (ಬ್ಯಾಗ್) ಮತ್ತು ನಾರಿ ಸಖಿಯರಿಗೆ ಸ್ಟೇಷನರಿ ಕಿಟ್‌ಗಳನ್ನು ವಿತರಿಸಲಾಯಿತು.

Leave a Reply

Your email address will not be published. Required fields are marked *