ದಿ ಮೂಮೆಂಟ್ ಗ್ಲೋಬಲ್ ಫೌಂಡೇಶನ್ ಮುಂಬೈ ಸಾಧನ ರಾಯಚೂರು, ಅನಿಕೇತನ ಪದವಿಪೂರ್ವ ಕಾಲೇಜು ಮತ್ತು ಗ್ರಾಮ ಜ್ಯೋತಿ ಸೊಸೈಟಿ ಹಾಗೂ ಸಾಧನ ರಾಯಚೂರು, ಯೂ.ಆರ್.ಐ ಸಿಂಧನೂರು ಇವರ ಸಂಯುಕ್ತಾಶ್ರಯದಲ್ಲಿ ಜನವರಿ.31ರಂದು ಮಹಿಳೆಯರ ಮತ್ತು ಬಾಲಕಿಯರ ಅಕ್ರಮ ಕಳ್ಳ ಸಾಗಾಣಿಕೆಯನ್ನು ವಿರೋಧಿಸಿ, ಮೌನ ಜಾಥಾವನ್ನು ಹಮ್ಮಿಕೊಳ್ಳಲಾಗಿದೆಂದು ಸಾಧನಾ ರಾಯಚೂರು ಕಾರ್ಯದರ್ಶಿ ಶರಣಪ್ಪ ಬರ್ಶಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
ಈ ಜಾಥಾವನ್ನು ಬೆಂಬಲಿಸಲು ಸಾರ್ವಜನಿಕರಿಗೆ ಸಂಘ ಸಂಸ್ಥೆಗಳಿಗೆ ವಿನಂತಿಸಿಕೊಳ್ಳುತ್ತೇವೆ, ಸದರಿ
ಈ ಕಾರ್ಯಕ್ರಮವು ಮೌನವಾಗಿದ್ದು, ಮಾನವ ಕಳ್ಳ ಸಾಗಾಣಿಕೆಯಲ್ಲಿ ಧ್ವನಿ ಇಲ್ಲದಂತೆ ಬದುಕುತ್ತಿರುವ ಬಲಿಪಶುಗಳೊಂದಿಗೆ ಏಕಾತ್ಮಾತೆಯನ್ನು ತೋರಿಸುವ ಉದ್ದೇಶವಾಗಿದೆ. ನಂತರ ಅನಿಕೇತನ ಕಾಲೇಜಿನಲ್ಲಿ ಬಹಿರಂಗ ಸಭೆಯನ್ನು ನಡೆಸಲಾಗುವುದು.
ಈ ಕಾರ್ಯಕ್ರಮದಲ್ಲಿ ಕನಕದಾಸ ಪದವಿ ಕಾಲೇಜಿನ ಪ್ರಾಚಾರ್ಯರಾದ ವೀಣಾಕ್ಷಿ ಮಾಡಸಿರವಾರ, ಅನಿಕೇತನ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ನಾಗರಾಜ ಮುಕ್ಕುಂದ, ಹಿರಿಯ ವರದಿಗಾರರಾದ ಡಿ.ಎಚ್.ಕಂಬಳಿ ಅಶೋಕ ಬೆನ್ನೂರು, ಗಂಗಾಧರ ವೀರಗಂಟಿ, ತುರ್ವಿಹಾಳ ಪಿಎಸ್ಐ ಸುಜಾತ, ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದರು.


