ಜನವರಿ 30 ರಿಂದ ಫೆಬ್ರವರಿ 13ರವರೆಗೆ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ನಡೆಯುತ್ತಿದ್ದು, ಸಾರ್ವಜನಿಕರು ಭಯ ಪಡದೆ, ಮೂಢನಂಬಿಕೆಗೆ ಒಳಗಾಗದೆ, ಕುಷ್ಟರೋಗದ ಲಕ್ಷಣ ಅರಿತು ಸರಿಯಾದ ಚಿಕಿತ್ಸೆ ಪಡೆದರೆ, ಗುಣಮುಖವಾಗುತ್ತದೆ. ಇದು ದೇವರ ಶಾಪವಲ್ಲ, ಇದೊಂದು ಸೂಕ್ಷ್ಮಾಣು ಜೀವಾಣುಗಳಿಂದ ಬರುವ ಕಾಯಿಲೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಅಯ್ಯನಗೌಡ ಹೇಳಿದರು.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜ.30 ಶುಕ್ರವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,
ಶತಮಾನಗಳಿಂದಲೂ ಸಮುದಾಯದಲ್ಲಿರುವ ಕುಷ್ಟರೋಗವನ್ನು ನಿರ್ಮೂಲನೆ ಮಾಡಲು ದೇಹದ ಮೇಲಿನ ಸ್ಪರ್ಶ ಜ್ಞಾನವಿಲ್ಲದ ತಿಳಿ, ಬಿಳಿ, ತಾಮ್ರ ಬಣ್ಣದ ಮಚ್ಚೆಗಳು ಹಾಗೂ ನರ ಮತ್ತು ಚರ್ಮದ ಕಾಯಿಲೆ ಇದಾಗಿದ್ದು, ಇದನ್ನು ಮಾತ್ರೆಗಳ ಮೂಲಕ ಸಂಪೂರ್ಣ ಗುಣಪಡಿಸಬಹುದು. ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿರುತ್ತದೆ ಹೆಚ್ಚಿನ ಜಾಗೃತಿಯನ್ನು ಸಮುದಾಯಕ್ಕೆ ತಲುಪುವಂತೆ ಹೆಚ್ಚು ಹೆಚ್ಚು ಜಾಗೃತಿ ಮೂಡಿಸಬೇಕು ಎಂದರು.

ಸಾರ್ವಜನಿಕ ಆಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿ
ಡಾ.ಸುರೇಶಗೌಡ ಮಾತನಾಡಿ, ತಾರತಮ್ಯವನ್ನು ಕೊನೆಗೊಳಿಸಿ ಘನತೆಯನ್ನು ಕಾಪಾಡೋಣ, ಕುಷ್ಠರೋಗ ತೊಲಗಿಸಿ ಎಂಬ ಘೋಷಣೆಯೊಂದಿಗೆ ಮನೆ ಮನೆಗೆ ಭೇಟಿ ನೀಡುವ ಆರೋಗ್ಯ ಸಹಾಯಕರು ಆಶಾ ಮತ್ತು ಸ್ವಯಂ ಸೇವಕರಿಂದ ಪರೀಕ್ಷಿಸಿಕೊಳ್ಳಿ, ಕುಷ್ಟರೋಗ ನಿವಾರಿಸಿ, ಅರಿವು ಮೂಡಿಸಿ, ಭಾರತವನ್ನು ಕುಷ್ಟರೋಗ ಮುಕ್ತ ಮಾಡಲು ಸರ್ವ ಪ್ರಯತ್ನ ಮಾಡೋಣ ಎಂದ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ: ತಾಲೂಕು ಸಾರ್ವಜನಿಕ ಆಸ್ಪತ್ರೆ ಡಾ.ಮಂಜುನಾಥ ಆಯುಷ್ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿಗಳು, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಎಲ್ಲಾ ಸಿಬ್ಬಂದಿಗಳು, ತಾಲೂಕಿನ ಎಲ್ಲಾ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು, ಹಿರಿಯ ಪ್ರಾಥಮಿಕ ಸುರಕ್ಷತಾ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು,
ಡಿ.ದರ್ಜೆ ನೌಕರರು ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *