ಕುಷ್ಠರೋಗ ನಿರ್ಮೂಲನೆಗೆ ಎಲ್ಲರೂ ಸಹಕರಿಸಿ: ಶ್ರೀ ಸುರೇಶ ವರ್ಮಾ ತಹಸೀಲ್ದಾರರು ರಾಯಚೂರು ತಾಲೂಕಿನಲ್ಲಿ ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಜನವರಿ 30-1-26 ರಿಂದ ಫೆಬ್ರವರಿ 13-2-26 ರವರೆಗೆ ಸಾರ್ವಜನಿಕರಲ್ಲಿ ಕುಷ್ಠರೋಗ ಬಗ್ಗೆ ಜಾಗೃತಿ ಮೂಡಿಸುವದಕ್ಕಾಗಿ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಾನ್ಯ ತಾಲೂಕ ಆರೋಗ್ಯ ಅಧಿಕಾರಿಗಳು ಡಾ. ಅಮೃತ್ ತಿಳಿಸಿದರು.
ತಹಸೀಲ್ದಾರರ ಕಛೇರಿಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ನಡೆದ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮದ ತಾಲೂಕ ಮಟ್ಟದ ಟಾಸ್ಕ ಪೂರ್ಸ ಸಭೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳು ಮಾತನಾಡಿದ‌ ಅವರು ನರಗಳಿಗೆ ಹಾಗೂ ಚರ್ಮಕ್ಕೆ ಸಂಬಂದಿಸಿದ್ದು, ಕುಷ್ಠರೋಗ ದೇಹದ ಮೇಲೆ ತಿಳಿ ಬಿಳಿ ತಾಮ್ರ ಬಣ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು ಕಂಡು ಬಂದಲ್ಲಿ ಕೂಡಲೆ ಹತ್ತಿರದ ಆರೋಗ್ಯ ಕೇಂದ್ರ ವ್ಯದ್ಯರಿಂದ ಪರೀಕ್ಷಿಸಿ ಕುಷ್ಟರೋಗ ಧೃಡಪಟ್ಟಲ್ಲಿ . ಚಿಕಿತ್ಸೆ ಪಡೆದು ಕೊಳ್ಳುವದರಿಂದ ಅಂಗ ವಿಕಲತೆಯನ್ನು ತಡೆಯಲು ಸಾದ್ಯವಿದೆ. ರಾಯಚೂರು ತಾಲೂಕಿನ ಗ್ರಾಮಗಳಲ್ಲಿ ಮನೆ ಮನೆ ಬೇಟಿ ಆರೋಗ್ಯ ಸಿಬ್ಬಂದಿ ಯವರು ಲಕ್ಷಣ ಪತ್ತೆ ಹಚ್ಚಿ ಹಾಗೂ ಅರಿವು ಮೂಡಿಸಲಾಗುತ್ತದೆ. ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಸುವದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.
ಮಾನ್ಯ ತಹಸೀ್ಲಾರರು
ತಾಲೂಕಿನಲ್ಲಿ ಕುಷ್ಠರೋಗ ನಿವಾರಣೆಗೆ ಸಾರ್ವಜನಿಕರು ವಿವಿಧ ಇಲಾಖೆಗಳ ಸಹಕಾರ ನೀಡುವುದರ ಮೂಲಕ ರಾಯಚೂರು ತಾಲೂಕವನ್ನು ಕುಷ್ಠರೋಗ ಮುಕ್ತ ರಾಯಚೂರು ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆ ತಾಲೂಕ ಮಟ್ಟದ ಅಧಿಕಾರಿಗಳು , ಇ.ಸಿ.ಓ ರಾಮಕೃಷ್ಣ ಶಿಕ್ಷಣ ಇಲಾಖೆ, ತಾಲ್ಲೂಕು ಮಟ್ಟದ ಮೇಲ್ವಿಚಾರಕರು ಹಾಜರಿದ್ದರು.

Leave a Reply

Your email address will not be published. Required fields are marked *