ಸಿಂಧನೂರು : ನಡೆದಾಡುವ ದೇವರು ತ್ರಿವಿಧ ದಾಸೋಹ ಮೂರ್ತಿಗಳಾದ ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಇಂದು ಕಾರುಣ್ಯ ಕುಟುಂಬಕ್ಕೆ ಪಾದಸ್ಪರ್ಶ ಮಾಡಿ ಎಲ್ಲಾ ವೃದ್ಧರ ಹಾಗೂ ಬುದ್ಧಿಮಾಂದ್ಯರ ಯೋಗಕ್ಷೇಮವನ್ನು ವಿಚಾರಿಸಿ ಹಣ್ಣು ಹಂಪಲುಗಳನ್ನು ವಿತರಿಸಿ ಆತ್ಮಸ್ಥೈರ್ಯ ತುಂಬಿದರು. ಈ ಸಮಯದಲ್ಲಿ ಆಶ್ರಮದ ಸಂಪೂರ್ಣ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದು ಕಾರುಣ್ಯ ಆಶ್ರಮದ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿ ಆಶೀರ್ವದಿಸಿದರು. ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ತ್ರಿವಿಧ ದಾಸೋಹಿ ಮೂರ್ತಿಗಳಾದ ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕಾರುಣ್ಯ ಆಶ್ರಮಕ್ಕೆ ಪಾದಸ್ಪರ್ಶ ಮಾಡಿ ಎಲ್ಲಾ ವೃದ್ಧರ ಹಾಗೂ ಬುದ್ಧಿಮಾಂದ್ಯರ ಯೋಗಕ್ಷೇಮವನ್ನು ವಿಚಾರಿಸಿ ಹಣ್ಣು ಹಂಪಲುಗಳನ್ನು ವಿತರಿಸಿ ಆತ್ಮಸ್ಥೈರ್ಯ ತುಂಬಿದರು. ಈ ಸಮಯದಲ್ಲಿ ಆಶ್ರಮದ ಸಂಪೂರ್ಣ ನಿರ್ವಹಣೆಯ ಬಗ್ಗೆ ಮಾಹಿತಿ ಪಡೆದು ಕಾರುಣ್ಯ ಆಶ್ರಮದ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿ ನಾಡಿನ ಹರ-ಗುರು ಚರಮೂರ್ತಿಗಳ ಆಶಯದಂತೆ ಕಾರುಣ್ಯ ಕುಟುಂಬದ ಸೇವೆ ಜರುಗುತ್ತಿದೆ. ಎಂದು ಆಶ್ರಮದ ಸೇವಾಕರ್ತ ದಂಪತಿಗಳಾದ ಸುಜಾತ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ ಹಾಗೂ ಸೇವಾ ಕರ್ತರುಗಳಾದ ಸುಜಾತ ಮಲದ ಗುಡ್ಡ. ಸಿದ್ದಯ್ಯ ಸ್ವಾಮಿ ಮರಿಯಪ್ಪ ಜ್ಯೋತಿ ಇವರೆಲ್ಲರುಗಳಿಗೆ ಆಶೀರ್ವದಿಸಿದರು. ಈ ಸಮಯದಲ್ಲಿ ಕೊಪ್ಪಳ ಗವಿಸಿದ್ದೇಶ್ವರ ಶ್ರೀ ಮಠದ ಸಿಬ್ಬಂದಿಗಳಾದ ಗವಿಸಿದ್ದಯ್ಯ ಸ್ವಾಮಿ. ಚಂದ್ರು ಗೌಡ ಸಂಸ್ಥಾಪಕರು ಆಶಾಕಿರಣ ಅನಾಥ ಮತ್ತು ಬಡ ಮಕ್ಕಳ ಶಾಲೆ ಸಿಂಧನೂರು. ಹಾಗೂ ಶಿಷ್ಯರುಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *