ಸಿಂಧನೂರು ಜನವರಿ 30 : ಜಿಲ್ಲಾಡಳಿತ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು ಪ್ರಾಥಮಿಕ ಆರೋಗ್ಯ ಕೇಂದ್ರ. ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸರಕಾರಿ ಪ್ರೌಢಶಾಲೆ ಜವಳಗೇರಾ ಇವರ ಸಂಯುಕ್ತ ಆಶ್ರಯದಲ್ಲಿ ಕುಷ್ಟರೋಗ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು
ಡಾಕ್ಟರ್ ಬಸವಲಿಂಗಯ್ಯ ಸ್ವಾಮಿ ಪ್ರಾಚಾರ್ಯರು ಅವರು ಮಾತನಾಡಿ ಕುಷ್ಟರೋಗ ಶಾಪವಲ್ಲ ಪಾಪುವಲ್ಲ ಯಾವುದೇ ಮೂಡನಂಬಿಕೆಗೆ ಬಲಿಯಾಗದೆ ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಿ ಎಂದರು,
ನಂತರ. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಅವರು ಮಾತನಾಡಿ ಇಂದು ಮಹಾತ್ಮ ಗಾಂಧೀಜಿಯವರ ಪುಣ್ಯ ಸ್ಮರಣೆ ದಿನದ ಅವರನ್ನು ಸ್ಮರಿಸುತ್ತಾ, ಅವರು ಕಂಡಿದ್ದ ಕುಷ್ಟರೋಗ ಮುಕ್ತ ಭಾರತವನ್ನು ಮಾಡಲು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕುಷ್ಠರೋಗ ಚರ್ಮ ಮತ್ತು ನರಗಳಿಗೆ ಬರುವಂತಹ ಕಾಯಿಲೆ ಪ್ರಾರಂಭ ಹಂತದಲ್ಲಿ ಕಂಡುಹಿಡಿದು ಬೇಗನೆ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಆರೋಗ್ಯವಾಗಿರಬಹುದಾಗಿದೆ. ಕುಷ್ಟರೋಗದ ಲಕ್ಷಣಗಳಾದ ತಿಳಿ ಬಳಿ ತಾಮ್ರ ಬಣ್ಣದ ಸ್ಪರ್ಶಜ್ಞಾನ ಇಲ್ಲದ ಮಚ್ಚೆಗಳು ಮಚ್ಚೆಯ ಮೇಲೆ ಕೂದಲು ಇಲ್ಲದಿರುವುದು ಮತ್ತು ಸ್ಪರ್ಶವನ್ನು ಕಳೆದುಕೊಂಡಿರುವುದು ಹಾಗೂ ನರಗಳಲ್ಲಿ ಜೂಮ್ ಹಿಡಿಯುವುದು ಕುಷ್ಟರೋಗದ ಲಕ್ಷಣವಾಗಿರುತ್ತದೆ ಇಂಥ ಲಕ್ಷಣಗಳು ಕಂಡು ಬಂದರೆ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡು ರೋಗ ಖಚಿತಪಟ್ಟರೆ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ. ಯಾವುದೇ ಭಯಭೀತರಾಗದೆ ಕಳಂಕಕ್ಕೆ ಒಳಗಾಗದೆ ಸೂಕ್ತವಾದ ಚಿಕಿತ್ಸೆಯನ್ನು ಪಡೆದುಕೊಂಡು ಆರೋಗ್ಯವಂತರಾಗಿರಬೇಕು ಎಂದು ಕುಷ್ಠರೋಗ ನಿರ್ಮೂಲನಾ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ತರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ ಬಸವಲಿಂಗಯ್ಯ ಸ್ವಾಮಿ ಮತ್ತು ಉಪನ್ಯಾಸಕರಾದ ಸಾಬಣ್ಣ ಸರಕಾರಿ ಪ್ರೌಢಶಾಲೆಯ ಮುಖ್ಯ ಗುರುಗಳಾದ ಜಿ. ಎಸ್. ಪಾಟೀಲ್, ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಹೇಶ. ಉದಯ ಕುಮಾರ. ಅಂಬಮ್ಮ ಹಾಗೂ ಉಪನ್ಯಾಸಕರು, ಶಿಕ್ಷಕರು . ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು

