ರಾಯಚೂರು ಜನವರಿ 29 (ಕರ್ನಾಟಕ ವಾರ್ತೆ): ಇಲ್ಲಿನ ನೇತಾಜಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮಣ ಲೇಔಟ್ ನಿವಾಸಿಯಾದ ಅಲ್ಬರ್ಟ ಜಾನ್ ತಂದೆ ಜಾನ್ ಬಾಸ್ಕರ್ (41) ಎಂಬ ಯುವಕ ಜನವರಿ 08ರ ಬೆಳಿಗ್ಗೆ 05 ಗಂಟೆಯ ಸುಮಾರಿಗೆ ಟಿಫಿನ್ ತೆಗೆದುಕೊಂಡು ಬರುತ್ತೇನೆ ಅಂತಾ ಹೇಳಿ ಹೋದವನ್ನು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಠಾಣೆಯಲ್ಲಿ ಅಪರಾಧ ಸಂಖ್ಯೆ:04/2026 ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಚಹರೆ ಪಟ್ಟಿ: ವಯಸ್ಸು: 41, 5.6 ಫೀಟ್ ಎತ್ತರ, ದುಂಡು ಮುಖ, ಸಧೃದ ಮೈ ಕಟ್ಟು, ಸಾದ ಕೆಂಪು ಮೈ ಬಣ್ಣ, ತಲೆಯಲ್ಲಿ ಕಪ್ಪು ಬಣ್ಣದ ಕೂದಲು, ಕುರುಚಲ ಗಡ್ಡ, ಬಲಗಡೆ ಕಪ್ಪು ಬಣ್ಣದ ನರ್ಲೇ, ಗಾಢಕಂದು ಬಣ್ಣದ ಪ್ಯಾಂಟ್, ತಿಳಿ ಹಸಿರು ಬಣ್ಣದ ತುಂಬು ತೋಳಿನ ಶರ್ಟ ಧರಿಸಲಾಗಿದ್ದು, ತೆಲುಗು, ಹಿಂದಿ, ಇಂಗ್ಲೀಷ ಹಾಗೂ ಕನ್ನಡ ಭಾಷೆ ಮಾತನಾಡುತ್ತಾರೆ.
ಈ ಚಹರೆವುಳ್ಳ ಮನುಷ್ಯ ಕಂಡಲ್ಲಿ ಮತ್ತು ಸುಳಿವು ಸಿಕ್ಕಲ್ಲಿ ನೇತಾಜಿ ನಗರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08532-240222 ಅಥವಾ ರಾಯಚೂರು ನಗರ ಪೊಲೀಸ್ ಕಂಟ್ರೋಲ್ ರೂಂ ದೂರವಾಣಿ ಸಂ: 08532-235635, 08532-235100, 9480803800 ಅಥವಾ ಪಿ.ಎಸ್.ಐ ಮೊಬೈಲ್ ಸಂಖ್ಯೆ: 9480803846, ನೇತಾಜಿ ನಗರ ಠಾಣೆ ಹಾಗೂ ಸಿ.ಪಿ.ಐ ಪಶ್ಚಿಮ ವೃತ್ತ ರಾಯಚೂರು ಮೊಬೈಲ್ ಸಂಖ್ಯೆ: 9480803831ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

