ಸಿಂಧನೂರು — ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ರಾಯಚೂರು ಹತ್ತನೇ ವರ್ಷದ ರಾಷ್ಟ್ರೀಯ ಯುನಾನಿ ದಿನಾಚರಣೆಯ 2026ನೇ ವರ್ಷದ ಅಂಗವಾಗಿ ನಡೆಸುವ ಪೂರ್ವಭಾವಿ ಕಾರ್ಯಕ್ರಮಗನ್ನು ವೃದ್ಧಾಶ್ರಮಗಳಲ್ಲಿ ವಯೋವೃತ್ತರಿಗೆ ಆಹಾರ ಪದ್ಧತಿಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಸರ್ಕಾರಿ ಯುನಾನಿ ಆಸ್ಪತ್ರೆ ಆಯುಷ್ ಇಲಾಖೆ ಸಿಂಧನೂರು ತಾಲೂಕ ಸಾರ್ವಜನಿಕ ಆಸ್ಪತ್ರೆಯ ವತಿಯಿಂದ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯಾದ ಶ್ರೀ ಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ವೃದ್ಧರು ಹಾಗೂ ವಯಸ್ಕರ ಬುದ್ಧಿಮಾಂದ್ಯರಿಗೆ ಆರೋಗ್ಯ ತಪಾಸಣೆ ಮಾಡಿ ಔಷಧಿಗಳನ್ನು ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸರ್ಕಾರಿ ಯುನಾನಿ ಆಸ್ಪತ್ರೆ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳಾದ ಡಾ. ಅಮ್ಜದ್ ಶರೀಫ್ ಮಾತನಾಡಿ ಆಯುರ್ವೇದ ಯೋಗ ಮತ್ತು ನೇಚರೋಪತಿ ಯುನಾನಿ ಸಿದ್ಧ ಹೋಮಿಯೋಪತಿಯೊಂದಿಗೆ ಕೂಡಿರುವುದೇ ಆಯುಷ್ ಇಲಾಖೆ ಈಗಿನ ವಾತಾವರಣದಲ್ಲಿ ವಯೋವೃದ್ದರೂ ಆಹಾರನ್ನು ಸೇವಿಸುವಾಗ ಹಲವಾರು ವಿಧಾನಗಳನ್ನು ಪಾಲಿಸಬೇಕು. ಮತ್ತು ಯೋಗ ಧ್ಯಾನ ಮಾಡುವುದರಿಂದ ತಮ್ಮ ಆರೋಗ್ಯದಲ್ಲಿ ಯಾವುದೇ ಕಾಯಿಲೆಗಳು ಕಂಡುಬರುವುದಿಲ್ಲ. ಈಗ ನಾವು ಕೊಡುತ್ತಿರುವ ಔಷಧಿ ಭೋಜನರ ನಂತರ ಅರ್ಧ ಚಮಚದಷ್ಟು ಸೇವಿಸಬೇಕು. ನಿತ್ಯ ನಿರಂತರವಾಗಿ ವ್ಯಾಯಾಮ ಮಾಡುವುದರ ಜೊತೆ ಬಿಸಿಲಿನ ವಾತಾವರಣದಲ್ಲಿ ಹೆಚ್ಚು ಸಮಯವನ್ನು ಕಳೆಯಬೇಕು. ತಮ್ಮಲ್ಲಿ ಯಾವುದೇ ಆರೋಗ್ಯದ ಸಮಸ್ಯೆಗಳಿದ್ದರೆ ಮುಂದಿನ ದಿನಮಾನಗಳಲ್ಲಿ ನಮ್ಮ ಇಲಾಖೆಯಿಂದ ನಿರಂತರವಾಗಿ ಸೇವೆ ಒದಗಿಸಲಾಗುತ್ತದೆ ಎಂದು ವೃದ್ಧರಲ್ಲಿ ಆರೋಗ್ಯದ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಂಡರು. ನಂತರ ಇನ್ನೊರ್ವ ವೈದ್ಯಾಧಿಕಾರಿಗಳಾದ ಡಾ.ಫೌಜೀಯಾ ಬೇಗಂ ಮಾತನಾಡಿ ಈ ನಮ್ಮ ಕಾರುಣ್ಯಾಶ್ರಮದಲ್ಲಿರುವ ವಯೋವೃದ್ದರೂ ಎಲ್ಲರೂ ಆರೋಗ್ಯವಂತರಾಗಿರುವುದು ನಮಗೆ ತುಂಬಾ ಸಂತೋಷವಾಗಿದೆ. ತಾವುಗಳು ನಿರಂತರ ಬೆಳಗಿನ ಜಾವದಲ್ಲಿ ಬಿಸಿನೀರು ಸೇವಿಸುವುದರಿಂದ ಉತ್ತಮ ಆರೋಗ್ಯವಂತರಾಗಿರುತ್ತಿರಿ ಎಂದು ಮಾತನಾಡಿ ವೃದ್ಧರಲ್ಲಿ ಆತ್ಮಸ್ಥೈರ್ಯ ತುಂಬಿದರು. ಈ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾದ ಡಾ. ಅಮ್ಜದ್ ಶರೀಫ್. ಡಾ.ಫೌಜಿಯಾ ಬೇಗಂ. ಇವರುಗಳನ್ನು ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಈ ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆಯ ಫಾರ್ಮಸಿ ಅಧಿಕಾರಿಗಳಾದ ಭಾರ್ಗವ. ಸಿಬ್ಬಂದಿಗಳಾದ ವಿಶ್ವನಾಥ. ಕಲಾಧರ ಹಾಗೂ ಆಶ್ರಮದ ಕಾರ್ಯ ಅಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ. ಶ್ರೀ ಮಠ ಸೇವಾ ಟ್ರಸ್ಟ್ ನ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದಗುಡ್ಡ. ಸಿದ್ದಯ್ಯ ಸ್ವಾಮಿ. ಮರಿಯಪ್ಪ. ಜ್ಯೋತಿ ಅನೇಕರು ಉಪಸ್ಥಿತರಿದ್ದರು

