ಸಿಂಧನೂರು— ನಗರದ ಬಸ್ ನಿಲ್ದಾಣದ ಎದುರುಗಡೆಯ ನೀವು ಭಾಂಡಗೆ ಜುವೆಲರ್ಸ್ ಮಾಲೀಕರಾದ ತೇಜಸ್ವಿನಿ ಭಾಂಡಗೆ ರಘು ಭಾಂಡಗೆ ಈ ದಂಪತಿಗಳ ಮಗಳಾದ ಹಿರಾಲ್ ಭಾಂಡಗೆ ಅವರ ದ್ವಿತೀಯ ವರ್ಷದ ಜನ್ಮದಿನವನ್ನು ನಗರದ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಮಹಾಪ್ರಸಾದ ಸೇವೆ ಹಣ್ಣು ಹಂಪಲುಗಳನ್ನು ವಿತರಿಸಿ ಆಶ್ರಮದ ನಿರ್ವಹಣೆಗಾಗಿ ಐವತ್ತು ಸಾವಿರ ರೂಪಾಯಿಗಳ ಧನ ಸಹಾಯ ಮಾಡುವುದರ ಮೂಲಕ ಸರಳವಾದ ಅರ್ಥಪೂರ್ಣ ಕಾರ್ಯಕ್ರಮ ನೆರವೇರಿತು. ಈ ಕಾರ್ಯಕ್ರಮದಲ್ಲಿ ತೇಜಸ್ವಿನಿ ಭಾಂಡಗೆ ರಘು ಭಾಂಡಗೆ ದಂಪತಿಗಳು ಹಾಗೂ ಹಿರಾಲ್ ಭಾಂಡಗೆ ಇವರುಗಳನ್ನು ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಂತರ ರಘು ಭಾಂಡಗೆ ಮಾತನಾಡಿ ಕಾರುಣ್ಯ ಎನ್ನುವ ಕರುಣೆಯ ಆಶ್ರಮ ನೊಂದವರ ಬಾಳಿಗೆ ನಾಡಿಮಿಡಿತವಾಗಿ ಸುಮಾರು ವರ್ಷಗಳಿಂದ ಪ್ರಾಮಾಣಿಕವಾದ ಸೇವೆ ಸಲ್ಲಿಸುತ್ತಾ ನಾಡಿನ ಕರುಣೆಯ ಕುಟುಂಬವಾಗಿರುವುದು ಅದೆಷ್ಟೋ ಯುವಕರಿಗೆ ಸಾರ್ವಜನಿಕರಿಗೆ ಸ್ಪೂರ್ತಿಯಾಗಿದೆ. ನಾವು ಸಹಾಯ ಮಾಡಬಹುದು ಆದರೆ ನಿತ್ಯ ನಿರಂತರ ಇಲ್ಲಿರುವ ಎಲ್ಲಾ ಹಿರಿಯ ವೃದ್ಧರ ಹಾಗೂ ವಯಸ್ಕರ ಬುದ್ಧಿಮಾಂದ್ಯರನ್ನು ಸ್ವಂತ ಕುಟುಂಬದವರ ಹಾಗೆ ನೋಡಿಕೊಳ್ಳುತ್ತಿರುವ ಈ ಕಾರುಣ್ಯ ಕುಟುಂಬ ನಮ್ಮ ಸ್ವಂತ ಕುಟುಂಬದಂತಿದೆ. ನಮ್ಮ ಈ ಅಳಿಲು ಸೇವೆ ಕಾರುಣ್ಯ ಆಶ್ರಮದ ಕೂಸುಗಳ ಆಶೀರ್ವಾದ ಬಯಸಿದೆ. ನಮ್ಮ ಭಾರತೀಯ ಸಂಸ್ಕೃತಿ ಸಂಸ್ಕಾರವನ್ನು ಉಳಿಸುವಂತಹ ನಿಟ್ಟಿನಲ್ಲಿ ಕಾರುಣ್ಯ ಕುಟುಂಬದ ಸೇವೆ ಸಮಾಜಕ್ಕೆ ಅಪಾರವಾಗಿದೆ ಎಂದು ಮಾತನಾಡಿ 50 ಸಾವಿರ ರೂಪಾಯಿಗಳ ಚೆಕ್ ವಿತರಿಸಿ ಸೇವೆಗೆ ಪ್ರೋತ್ಸಾಹಿಸಿದರು. ಸೇವೆಯನ್ನು ಸ್ವೀಕರಿಸಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ ಮಾತನಾಡಿ ನಮ್ಮ ರಘು ಭಾಂಡಗೆ ಅವರು ತಮ್ಮ ನೂತನ ಅಂಗಡಿ ಪ್ರಾರಂಭೋತ್ಸವದಲ್ಲಿಯೂ ಕೂಡ 50,000ಗಳನ್ನು ನೀಡುವುದರ ಮೂಲಕ ಕಾರುಣ್ಯ ಕುಟುಂಬದ ಕಷ್ಟವನ್ನು ನೀಗಿಸಿದ್ದರು. ಮತ್ತು ಇಂದು ತಮ್ಮ ಮಗಳಾದ ಹಿರಾಲ್ ಅವರ ಜನ್ಮದಿನವನ್ನು ಕೂಡ ಈ ರೀತಿ ಆಚರಣೆ ಮಾಡಿರುವುದು. ನಮಗೆ ಇನ್ನೂ ಹೆಚ್ಚಿನ ಸಾಮಾಜಿಕ ಸೇವೆ ಮಾಡಲು ಶಕ್ತಿ ಬಂದಂತಾಗಿದೆ. ಸಿಂಧನೂರಿನ ಭಾಂಡಗೆ ಕುಟುಂಬದ ಸೇವೆ ಕಾರುಣ್ಯ ಆಶ್ರಮಕ್ಕೆ ನಿರಂತರ ದೊರೆಯುತ್ತಿದ್ದು ಅವರ ಈ ಸೇವೆ ಭಗವಂತನ ಪೂಜೆಗಿಂತ ಮಿಗಿಲಾದುದು ಎಂದು ಮಾತನಾಡಿ ಭಾಂಡಗೆ ಕುಟುಂಬಕ್ಕೆ ಮತ್ತು ಈ ದಂಪತಿಗಳಿಗೆ ಶುಭ ಹಾರೈಸಿದರು.

