ಮಾನ್ವಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ (ರಿ) ರಾಯಚೂರು ಬಿ. ರಾಮಣ್ಣ ನಾಯಕ ಜಿಲ್ಲಾಧ್ಯಕ್ಷರ ಆದೇಶದ ಮೇರೆಗೆ ಮಾನವಿ ತಾಲೂಕ ಘಟಕಕ್ಕೆ ತಾಲೂಕ ಪ್ರಧಾನ ಕಾರ್ಯದರ್ಶಿಯಾಗಿ ಕೊಂಡಯ್ಯ ನಾಯಕ ಬೆಳಗಿನಪೇಟೆ ಮಾನ್ವಿ ಇವರನ್ನು ತಾಲೂಕ ಪ್ರಧಾನ ಕಾರ್ಯದರ್ಶಿ ಎಂದು ನೇಮಕ ಮಾಡಿದ್ದು. ಕೂಡಲೇ ಸಂಘದ ಎಲ್ಲಾ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಶೈಕ್ಷಣಿಕ, ಆರ್ಥಿಕ, ಹಾಗೂ ಸಂಘಟನೆಯ ಬಲವರ್ಧನೆಗಾಗಿ ಶ್ರಮಿಸಲು ಈ ಮೂಲಕ ತಮಗೆ ಸೂಚಿಸಿ ಆದೇಶಿಸಿದೆ.ನಂತರ ತಾಲೂಕ ಪ್ರಧಾನ ಕಾರ್ಯದರ್ಶಿ ಯಾಗಿ ಆಯ್ಕೆಯಾದ ಕೊಂಡಯ್ಯ ನಾಯಕಗೆ ಅವರ ಅಭಿಮಾನಿ ಬಳಗ ಸನ್ಮಾನಿಸಿ ಗೌರವಸಿದರು.ಈ ಸಂದರ್ಭದಲ್ಲಿ ಗೋಪಾಲ ನಾಯಕ ಕರಡಿಗುಡ್ಡ,ನಾಯ್ಡು ನಾಯಕ,ವಿನೋದ ಕುಮಾರ, ಕೆ.ಸಾಜೀದ ಪಾಷ , ಬಸವರಾಜ ಸ್ವಾಮಿ, ಅಂಬು ನಾಯಕ, ಶಿವಾನಂದ ನಾಯಕ,ಯಲ್ಲಯ್ಯ ನಾಯಕ,ಶಂಕರ ನಾಯಕ,ದೇವರಾಜ ನಾಯಕ,ರಮೇಶ ನಾಯಕ, ಹನುಮೇಶ ನಾಯಕ,ಉಪೇಂದ್ರ ನಾಯಕ,ತಾಯಣ್ಣ ನಾಯಕ, ನರಸಿಂಹ ನಾಯಕ, ರಮೇಶ ನಾಯಕ,ಜಗದೀಶ, ಪಂಪಣ್ಣ ನಾಯಕ,ವಿರೇಶ ನಾಯಕ, ದೇವು ನಾಯಕ,ಮಂಜು ನಾಯಕ, ಈರಯ್ಯ ನಾಯಕ ಇತರರರು ಉಪಸ್ಥಿತರಿದ್ದರು.

