ರಾಯಚೂರು ಜನವರಿ 28 (ಕರ್ನಾಟಕ ವಾರ್ತೆ): ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಫೆ.5ರಿಂದ ಮೂರು ದಿನಗಳ ಕಾಲ ರಾಯಚೂರು ಜಿಲ್ಲೆಯಲ್ಲಿ ನಿಗದಿಯಾದ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಪ್ರಚಾರ ಕಾರ್ಯಕ್ರಮಗಳು ಜನವರಿ 28ರಂದು ಶಕ್ತಿನಗರದಲ್ಲಿನ ಆರ್‌ಟಿಪಿಎಸ್‌ನಲ್ಲಿ ಹಾಗೂ ಕೆಪಿಸಿ ಡಿಎವಿ ಪ್ರೌಢಶಾಲೆ ಮತ್ತು ಬ್ಲೆಸ್ಡ್ ಆಲ್ಫೋನ್ಸಾ ಪ್ರೌಢಶಾಲೆಗಳಲ್ಲಿ ನಡೆದವು.
ಪ್ರಚಾರ ಸಮಿತಿಯ ಸದಸ್ಯರು ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿ ಸದಾಶಿವಪ್ಪ ಅವರು ಮಾತನಾಡಿ, ರಾಯಚೂರು ಜಿಲ್ಲೆಯಲ್ಲಿ ಬಹುವರ್ಷಗಳ ನಂತರ ಜಿಲ್ಲಾ ಉತ್ಸವ ನಿಗದಿಯಾಗಿದೆ. ಇದು ನಮ್ಮೆಲ್ಲರ ಮನೆಯ ಹಬ್ಬವಾಗಿದೆ. ನಮ್ಮೂರಿನ ವಿವಿಧ ಕಲೆ ಸಾಹಿತ್ಯ ಪ್ರಕಾರಗಳ ಅನಾವರಣವು ಇಲ್ಲಿ ನಡೆಯಲಿದೆ. ಖ್ಯಾತ ಕಲಾವಿದರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಎಲ್ಲರೂ ಸೇರಿ ಕಾರ್ಯಕ್ರಮದಲ್ಲಿ ಭಾಗಿಯಾಗಿ, ಉತ್ಸವ ಯಶಗೊಳಿಸೋಣ ಎಂದು ಇದೆ ವೇಳೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಖೆಯ ನಾಗರಾಜ, ಗ್ರಂಥಾಲಯ ಇಲಾಖೆಯ ಮರೆಪ್ಪ ಸೇರಿದಂತೆ ಪ್ರಚಾರ ಸಮಿತಿಯ ಇನ್ನೀತರ ಸದಸ್ಯರು ಇದ್ದರು.

Leave a Reply

Your email address will not be published. Required fields are marked *