ಕವಿತಾಳ : ಪಟ್ಟಣ ಸಮೀಪದ ಹಿರೇಹಣಗಿ ಗ್ರಾಮದಲ್ಲಿ ಇಂದು ರೇಖಾ ಗಂಡ ನಾಗರಾಜ್ ನಾಯಕ್(24) ಎಂಬ ಮಹಿಳೆಯನ್ನು ಮಾವ ಸಿದ್ದಪ್ಪ ನಾಯಕ್ ಕುಡುಗೋಲಿನಿಂದ ಕುತ್ತಿಗೆ ಕೊಯ್ದು ಹತ್ಯೆ ಮಾಡಿದ ಘಟನೆ ನೆಡೆದಿದ್ದು,
ಮೃತ ಮಹಿಳೆಯ ವಿವಾಹವು ಕಳೆದ ಐದು ವರ್ಷದ ಹಿಂದೆ ಚಿಕ್ಕಹಣಗಿ ಗ್ರಾಮದ ನಾಗರಾಜ್ ಎನ್ನುವವರ ಜೊತೆ ಮಾಡಲಾಗಿತ್ತು ಆದರೇ ಮಕ್ಕಳಾಗಿರಲ್ಲಿ ಮೃತ ಮಹಿಳೆಯು ಮೂರು ತಿಂಗಳ ಗರ್ಭಿಣಿಯಿದ್ದು ತವರು ಮನೆಗೆ ಬಂದಿದ್ದಾಳೆ ಇಂದು ಮಾವ ಅವಳ ತವರು ಮನೆಗೆ ಬಂದು ಅಲ್ಲಿಯೇ ಕೊಲೆ ಮಾಡಿದ್ದಾಗಿ ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಚಂದ್ರಶೇಖರ, ಸಿಪಿಐ ಶಶಿಕಾಂತ, ಪಿಎಸ್‌ಐ ಗುರುಚಂದ್ರ ಯಾದವ್ ಭೇಟಿನೀಡಿ ಪರಿಶೀಲಿಸಿದ್ದು ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ. ಕೊಲೆ ಮಾಡಿದ ಸಿದ್ದಪ್ಪ ನಾಯಕನನ್ನು ಬಂದಿಸಲಾಗಿದೆ.

Leave a Reply

Your email address will not be published. Required fields are marked *