ಮಸ್ಕಿ ಜ. 27 : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ರಾಯಚೂರು ಜಿಲ್ಲಾ ಸಹಕಾರ ಒಕ್ಕೂಟ, ರಾಯಚೂರು ಬಳ್ಳಾರಿ ಕೊಪ್ಪಳ ಹಾಗೂ ವಿಜಯನಗರ ಜಿಲ್ಲಾ ಸಹಕಾರ ಹಾಲು ಒಕ್ಕೂಟ (ಕೆ.ಎಂ.ಎಫ್) ಸಿಂಧನೂರು, ಸಹಕಾರ ಇಲಾಖೆ ಹಾಗೂ ಮಸ್ಕಿ ತಾಲೂಲಿನ ಹಾಲು ಉತ್ಪಾದಕರ ಸಹಕಾರ ಸಂಘಗಳು ಇವರುಗಳ ಸಂಯುಕ್ತ ಆಶ್ರಯದಲ್ಲಿ “ಮಸ್ಕಿ ತಾಲೂಕಿನಲ್ಲಿ ೨೦೨೪-೨೫ನೇ ಸಾಲಿನಲ್ಲಿ ಹೊಸದಾಗಿ ರಚನೆಯಾದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ವಿಶೇಷ ಕಾರ್ಯಕ್ರಮ”ವನ್ನು ದಿನಾಂಕ : ೨೯-೦೧-೨೦೨೬ ರಂದು ತಾಲೂಕು ಪಂಚಾಯತ್ ಕಾರ್ಯಾಲಯ ಮಸ್ಕಿ ಇಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಕಮತಗಿ ಸಹಕಾರ ಇಲಾಖೆ, (ಎ.ಆರ್.ಸಿ.ಎಸ್. ಕಛೇರಿ), ಸಿಂಧನೂರು ಅವರು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಕರ್ತವ್ಯ ಮತ್ತು ಜವಾಬ್ದಾರಿಗಳ ಕುರಿತು ಮತ್ತು ಡಾ|| ದೇವಣ್ಣ ಪಶು ವೈದ್ಯರು, ಕೆ.ಎಂ.ಎಫ್ ಹಾಲು ಒಕ್ಕೂಟ ನಿ., ಬಳ್ಳಾರಿ.ಅವರು ಪಶು ಆಹಾರ, ಗುಣಮಟ್ಟದ ಮತ್ತು ಅಧಿಕ ಹಾಲಿನ ಉತ್ಪಾದನೆಗೆ ಉತ್ತೇಜನ, ರಾಸುಗಳ ನಿರ್ವಹಣೆ, ಕರುಗಳ ಲಾಲನೆ ಪಾಲನೆ ಹಾಗೂ ಹೈನುಗಾರಿಕೆ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಕೆ.ಎಂ.ಎಫ್. ಹಾಲು ಒಕ್ಕೂಟ ಮತ್ತು ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರುಗಳು ಭಾಗವಹಿಸಲಿದ್ದಾರೆ. ಕಾರಣ ಮಸ್ಕಿ ತಾಲೂಕಿನ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ರಾಯಚೂರು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರು, ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಕೆ.ಎಂ.ಎಫ್ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿರುತ್ತಾರೆ.

Leave a Reply

Your email address will not be published. Required fields are marked *