ಕರ್ನಾಟಕ ರಾಜ್ಯ ಭೋವಿ ವಡ್ಡರ ಸಮಾಜ ತಾಲೂಕು ಘಟಕದಿಂದ ಸಿಂಧನೂರು ನಗರದಲ್ಲಿ ಪ್ರಥಮ ಬಾರಿಗೆ ಸ್ವತಂತ್ರ ಹೋರಾಟಗಾರ ಕಿತ್ತೂರು ಸಂಸ್ಥಾನದ ಬೆಳವಡಿ
ವಡ್ಡರ ಯಲ್ಲಣ್ಣನವರ 226ನೇ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ನಗರದ ಪ್ರವಾಸಿಮಂದಿರ ಎದುರಿಗೆ ಇರುವ ತರಕಾರಿ ಮಾರುಕಟ್ಟೆಯಲ್ಲಿ ಜ.28 ಬುಧವಾರದಂದು ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಂತರ ತಾಲೂಕು ಯುವ ಘಟಕದ ಅಧ್ಯಕ್ಷರಾದ ರೌಡಕುಂದ ಹನುಮೇಶ ಮಲ್ಲದಗುಡ್ಡ ಮಾತನಾಡಿ, ಎಂಟದೆಯ ಭಂಟ ಸಂಗೊಳ್ಳಿ ರಾಯಣ್ಣನ ಬಲಗೈ ಭಂಟನಾಗಿ, ಕಿತ್ತೂರು ರಾಣಿ ಚೆನ್ನಮ್ಮನವರ ಎರಡನೇ ದತ್ತು ಪುತ್ರನಾಗಿ, ಬ್ರಿಟಿಷರ ವಿರುದ್ದ ಹೋರಾಟ ಮಾಡಿ, ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ತರುವಲ್ಲಿ ಅವರು ಕೂಡ ಒಬ್ಬರಾಗಿದ್ದರು, ಇಂತಹ ಮಹಾನ್ ವ್ಯಕ್ತಿಯನ್ನು ಪಡೆದ ಸಮಾಜ ಹೆಮ್ಮೆ ಪಡಬೇಕಾದ ವಿಷಯವಾಗಿದೆ.
ಶಬ್ದವೇಧಿ ತಂತ್ರದ ವಿದ್ಯೆಯನ್ನು ಕಲಿತಿದ್ದ ಯಲ್ಲಣ್ಣ ಶತ್ರುಗಳ ಸೈನ್ಯ ಬರುವುದನ್ನು ಕೇವಲ ಶಬ್ದದಿಂದಲೇ ಕಂಡು ಹಿಡಿದು, ಸಂಗೊಳ್ಳಿ ರಾಯಣ್ಣನಿಗೆ ತಿಳಿಸುತ್ತಿದ್ದ ಸುಮಾರು 800 ಸೈನಿಕರನ್ನು ಒಗ್ಗೂಡಿಸಿ ರಾಯಣ್ಣನ ಬೆನ್ನೆಲುಬಾಗಿ ನಿಂತ ಮಹಾನ್ ಧೀರವಂತ ನಿಷ್ಠಾವಂತ ಸೇವಕನಾಗಿದ್ದರು. ಕರ್ನಾಟಕ ರಾಜ್ಯದಲ್ಲಿ ಬೆಳವಡಿ ಯಲ್ಲಣ್ಣನವರ ಪ್ರಾಧಿಕಾರ ರಚನೆಯಾಗಬೇಕು ರಾಜ್ಯ ಸರ್ಕಾರ ಈ ವಿಷಯವನ್ನು ಸೂಕ್ಷ್ಮವಾಗಿ ಗಮನಿಸಿ ನಮ್ಮ ಭೋವಿ ವಡ್ಡರ ಸಮಾಜದ ಜನರ ಬೇಡಿಕೆ ಈಡೇರಿಸಬೇಕು ಎಂದರು.
ಈ ವೇಳೆ: ಶಂಕರಪ್ಪ ಬ್ಯಾಡಗಿ ವಿರುಪಾಪುರ, ನಿರುಪಾದಿ ಸಾಸಲಮರಿ, ವೀರೇಶ ಸಿದ್ರಾಂಪುರ, ಶಿವಕುಮಾರ ವಿರುಪಾಪುರ, ಹನುಮೇಶ ತಿಡಿಗೋಳ, ತಿಮ್ಮಾರೆಡ್ಡಿ ಸಾಸಲಮರಿ, ವೆಂಕಟೇಶ ತುರ್ವಿಹಾಳ, ಯಂಕೋಬ ರೌಡಕುಂದ, ವೆಂಕಟೇಶ ಸಿಂಧನೂರು, ದ್ಯಾವಣ್ಣ ಮಲ್ಲದಗುಡ್ಡ, ಮಾರೇಶ ರಾಗಲಪರ್ವಿ, ಸೇರಿದಂತೆ ಸಮಾಜದ ಅನೇಕ ಮುಖಂಡರು ಭಾಗವಹಿಸಿ ಬೆಳವಡಿ ಯಲ್ಲಣ್ಣನ 226ನೇ ಜಯಂತಿ ಆಚರಿಸಿದರು.

