ಲಿಂಗಸೂರು: ದಿನಾಂಕ: 28-01-2026 ರಂದು ಕರ್ನಾಟಕ ರಕ್ಷಣಾ ವೇದಿಕೆ ( ಪ್ರವೀಣ್ ಕುಮಾರ ಶೆಟ್ಟಿ ಬಣ ) ದ ಸಂಘಟನೆ ತಾಲೂಕ ಘಟಕ ಲಿಂಗಸೂಗೂರು ವತಿಯಿಂದ ಪುರಸಭೆ ವ್ಯಾಪ್ತಿಯ ಎಲ್ಲಾ ಲೇಔಟ್ ಗಳಲ್ಲಿರುವ ಉದ್ಯಾನವನ ಹಾಗೂ ನಾಗರೀಕರ ಸೌಲಭ್ಯಕ್ಕಾಗಿ ಮೀಸಲಿಟ್ಟ ಜಾಗವನ್ನು ಗುರುತಿಸಿ ಹದುಬಸ್ತ್ ಮಾಡಿ ನಾಮಫಲಕ ಅಳವಡಿಸಬೇಕು ಹಾಗೂ ಅಂಗಡಿ ಮುಗ್ಗಟ್ಟುಗಳ ನಾಮಫಲಕಗಳಲ್ಲಿ ಶೇಕಡಾ 60% ರಷ್ಟು ಕನ್ನಡದಲ್ಲಿರುವಂತೆ ಕ್ರಮ ಜರುಗಿಸುವ ಕುರಿತು ಮಾನ್ಯ ಪುರಸಭೆ ಮುಖ್ಯಾಧಿಕಾರಿಗಳು ಪುರಸಭೆ ಕಾರ್ಯಾಲಯ ಲಿಂಗಸೂಗೂರು ಇವರಿಗೆ ಮನವಿ ನೀಡಲಾಯಿತು…
ಈ ಸಂದರ್ಭದಲ್ಲಿ ಕರವೇ ಅಧ್ಯಕ್ಷರಾದ ಶ್ರೀ ಆಂಜನೇಯ ಹೆಚ್. ಭಂಡಾರಿ, ಉಪಾಧ್ಯಕ್ಷರಾದ ಭೀಮೇಶ್ ಎಲ್. ನಾಯಕ, ಶಿವು ಪತ್ತಾರ್, ಸಲೀಂಖಾನ್, ಮೌನೇಶ್ ಬುಳ್ಳಾಪುರ, ಶಾರು ಜೋಗೇರಾ, ಅಭಿಷೇಕ್ ನಾಯಕ ಹಾಗೂ ಪ್ರೇಮ್ ಕುಮಾರ ಪಾಟೀಲ್ ಸೇರಿದಂತೆ ಉಪಸ್ಥಿತರಿದ್ದರು….

Leave a Reply

Your email address will not be published. Required fields are marked *