ಮಾನ್ವಿ: ವಿಜಯನಗರ ಜಿಲ್ಲೆಯ ಕೊಟ್ಟೂರಿನ ಇಂದಿರಾ ಚಾರಿಟಬಲ್ ಅಂಡ್ ಎಜ್ಯುಕೇಷನಲ್ ಟ್ರಸ್ಟ್ (ರಿ.).
ಆಡಳಿತ ಮಂಡಳಿ ಅಧೀನದಲ್ಲಿ ನಡೆಯುತ್ತಿರುವ ಇಂದು ಪದವಿ ಪೂರ್ವ ಮಹಾವಿದ್ಯಾಲಯ 21ನೇ ವರ್ಷಕ್ಕೆ ಕಾಲಿಡುತ್ತಿರುವ ಸುಸಂದರ್ಭದಲ್ಲಿ ಕನ್ನಡ ಭಾಷಾ ವಿಷಯದ ಶಿಕ್ಷಕರಾಗಿ ಪ್ರೌಢಶಾಲೆಯಲ್ಲಿ ಗಣನೀಯ ಸೇವೆ ಸಲ್ಲಿಸಿ ಅತ್ಯುತ್ತಮ ಸಾಧನೆಗೈದ, ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯದ ಮಾರ್ಗದರ್ಶನ ತೋರಿದ ರಾಯಚೂರು ಜಿಲ್ಲಾ ಮಾನವಿ ತಾಲೂಕಿನ ಶ್ರೀ ವೆಂಕಟೇಶ್ವರ ಕನ್ನಡ ಭಾಷಾ ಶಿಕ್ಷಕರಾದ ಶ್ರೀ ಆಂಜನಯ್ಯ ಬೋವಿ ಸುಂಕೇಶ್ವರ ದಿನಾಂಕ 25-01-2016ರಂದು ಕೊಟ್ಟೂರಿನ ಇಂದು ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಆಡಳಿತ ಮಂಡಳಿ ವತಿಯಿಂದ “ಸಾಹಿತ್ಯ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಂಸ್ಥೆಯ ಅಧ್ಯಕ್ಷರಾದ ಮಹಾಂತೇಶ್ ಓಲೇಕಾರ್ ಹಾಗೂ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *