ಲಿಂಗಸೂರು: ದಿನಾಂಕ: 20/01/2026 ರಂದು ಹತ್ಯೆಯಾದ ಧಾರವಾಡ ನಗರ ನಿವಾಸಿಯಾಗಿರುವ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಝಕಿಯಾ ಮುಲ್ಲಾರ ಕೊಲೆ ಇಡೀ ಸಮಾಜದ ಮಾನವ ಕುಲ ತಲೆ ತಗ್ಗಿಸುವ ಹಾಗೂ ಖಂಡಿಸುವ ಈ ಘಟನೆಗೆ ಸಂಬಂಧಪಟ್ಟಂತೆ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರ ತಾಲೂಕು ಕಮಿಟಿಯು ತೀವ್ರ ಸಂತಾಪ ಹಾಗೂ ವಿಷಾದ ವ್ಯಕ್ತಪಡಿಸುತ್ತದೆ, ಸದರಿ ಘಟನೆಯಲ್ಲಿ ಹತ್ಯೆಯಾದ ಝಕೀಯ ಮುಲ್ಲಾರಿಗೆ ಇಂದು ಸಾಯಂಕಾಲ 6.30 ಗಂಟೆಗೆ ಅಂಜುಮನ್-ಎ-ಮುಸ್ಲಿಮೀನ್ ಲಿಂಗಸೂಗೂರ ತಾಲೂಕು ಕಮಿಟಿವತಿಯಿಂದ ಗಡಿಯಾರ ಚೌಕಿನಲ್ಲಿ ಮೇಣದ ಬತ್ತಿ ಬೆಳಗಿಸಿ ಶ್ರದ್ದಾಂಜಲಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಅಂಜುಮನ್ ಲಿಂಗಸೂಗೂರ ತಾಲೂಕು ಕಮಿಟಿಯ ಗೌರವ ಅಧ್ಯಕ್ಷರಾದ ಅನ್ಸರ್ ಭಾಯಿ, ಅಧ್ಯಕ್ಷರಾದ ಹುಸೇನ್ ಭಾಷಾ ಕೆ., ಉಪಾಧ್ಯಕ್ಷರಾದ ಮುಸ್ತಫಾ, ಪ್ರಧಾನ ಕಾರ್ಯದರ್ಶಿಯಾದ ಅಮೀನ್ ಭಾಯಿ, ಹಸನ್ ಭಾಯಿ, ಆರಿಫ್, ವಸಿಂ, ಸಲೀಂ, ಅಬ್ದುಲ್ಲ ರಜಾಕ್, ಲಾಲಾ ಸಾಬ್, ಹಜರತ್, ಖಯ್ಯುಮ್, ಯುನುಸ್, ಬಾಬರ್, ಮಹೇಬೂಬ್, ಅಬ್ದುಲ್ಲ ವಹೀದ್ ಇಬ್ರಾಹಿಂ, ಅಬ್ಬಾಸ್, ಇರ್ಫಾನ್, ಹುಸೇನ್, ಅಯ್ಯುಬ್, ವಸಿಂ ಪಾಷಾ, ದಾದಾಪೀರ್ ಹಾಗೂ ಅಂಜುಮನ್ ಲಿಂಗಸೂಗೂರ ತಾಲೂಕು ಕಮಿಟಿಯ ಕಾರ್ಯ ಕಾರಿ ಸಮಿತಿಯ ಸದಸ್ಯರು & ಅಂಜುಮನ್ ಕಮಿಟಿಯ ಅಪಾರ ಪ್ರಮಾಣದ ಬೆಂಬಲಿಗರು ಉಪಸ್ಥಿತರಿದ್ದರು

