ಸಿಂಧನೂರು : ಭಾರತದ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ, ಅಂತಹ ಸವಿಧಾನವನ್ನು ರಚಿಸಿದ ಡಾ. ಬಾಬಾ ಸಾಬ್ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ಕೆಲಸ ಪ್ರತಿಯೊಬ್ಬರಿಂದ ಆಗಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯಕಾರಿ ಮಂಡಳಿಯ ಸದಸ್ಯ ಚಂದ್ರಶೇಖರ ಯರದಿಹಾಳ ಹೇಳಿದರು

ಅವರು ನಗರದ ಕೋಟೆ ಬಡಾವಣೆಯಲ್ಲಿ ಇರುವ ಸೌದಾಗರ್ ಶಾಲೆಯಲ್ಲಿ 77 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು 26 ನೇ ಜನವರಿ 1950 ರಂದು ಭಾರತವು ಸಂವಿಧಾನವನ್ನು ಅಂಗೀಕರಿಸಿದ, ಗಣರಾಜ್ಯೋತ್ಸವ ದಿನ ಇಂದು ಆಗಿದೆ, ಪ್ರತಿಯೊಬ್ಬರು ಸಂವಿಧಾನವನ್ನು ಗೌರವಿಸೋಣ ಕಾನೂನು ಅಡಿಯಲ್ಲಿ ಪ್ರತಿಯೊಬ್ಬರು ಕಾರ್ಯನಿರ್ವಹಿಸುವ ಕೆಲಸ ಆಗಬೇಕು ಮತ್ತು ದೇಶದ ಸಂಸ್ಕೃತಿಯನ್ನು ಎತ್ತಿಡುವ ಕೆಲಸ ಆಗಬೇಕು ಎಂದರು.

ಸಾಹಿತಿ ವೆಂಕಣ್ಣ ಆಚಾರ್ಯ ಜೋಶಿ ಮಾತನಾಡಿ ದೇಶದ ಮಹಾತ್ಮರನ್ನು ನೆನಪಿಸಿಕೊಳ್ಳುವ ಕೆಲಸ ಇಂದಿನ ಯುವಕರಿಂದ ಆಗಬೇಕು, ಆಗ ಮಾತ್ರ ದೇಶದ ಬಗ್ಗೆ ಮತ್ತಷ್ಟು ಜಾಗೃತರಾಗಲು ಸಾಧ್ಯವಾಗುತ್ತದೆ ಎಂದರು.
ಯೋಗ ಗುರು ಎಂ.ಭಾಸ್ಕರ್ ಮಾತನಾಡಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಆದರ್ಶ, ತತ್ವ,ಸಿದ್ಧಾಂತಗಳನ್ನು ಪಾಲನೆ ಮಾಡಬೇಕು ಆಗ ಮಾತ್ರ ಜೀವನ ಸುಂದರವಾಗಲು ಸಾಧ್ಯವಾಗುತ್ತದೆ, ಯುವಕರು ಆರೋಗ್ಯದ ಕಡೆ ಹೆಚ್ಚು ಹೆಚ್ಚು ಗಮನವಿಸುವ ಕೆಲಸ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಸೌದಾಗರ್ ಸಂಸ್ಥೆಯ ಅಧ್ಯಕ್ಷ ಅಸಾದ್ ಖಾನ್, ಬಾಬರ್ ಸಾಬ್, ಶಿಕ್ಷಕ ರಾಜಣ್ಣ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *