ಸಿಂಧನೂರು : ಶತ ಶತಮಾನಗಳಿಂದ ಇಂದಿಗೂ ಸಮುದಾಯದಲ್ಲಿರುವ ಕುಷ್ಟರೋಗವನ್ನು ನಿರ್ಮೂಲನೆ ಮಾಡಲು ದೇಹದ ಮೇಲಿನ ಸ್ಪರ್ಶ ಜ್ಞಾನವಿಲ್ಲದ ತಿಳಿ ಬಿಳಿ ತಾಮ್ರ ಬಣ್ಣದ ಮಚ್ಚೆಗಳು ಹಾಗೂ ನರ ಮತ್ತು ಚರ್ಮದ ಕಾಯಿಲೆಯಾಗಿದ್ದು ಇದನ್ನು ಮಾತ್ರೆಗಳ ಮೂಲಕ ಸಂಪೂರ್ಣ ಗುಣಪಡಿಸುವುದು ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿರುತ್ತದೆ ಹೆಚ್ಚಿನ ಜಾಗೃತಿಯನ್ನು ಸಮುದಾಯಕ್ಕೆ ತಲುಪುವಂತೆ ಹೆಚ್ಚು ಹೆಚ್ಚು ಪ್ರಚೂರು ಪಡಿಸಲು ತಾಲೂಕು ದಂಡಾಧಿಕಾರಿಗಳು ತಿಳಿಸಿದರು. ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನ ಕಾರ್ಯಕ್ರಮದಡಿ ಜನವರಿ 30 ರಿಂದ ಫೆಬ್ರುವರಿ 13 ರವರೆಗೆ ಕಾರ್ಯಕ್ರಮನಡೆಯಲಿದ್ದು ಸ್ಪರ್ಶ ಕುಷ್ಟರೋಗ ಜಾಗೃತಿ ಅಭಿಯಾನದ ಕುರಿತು ತಾಲೂಕು ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ಶಾಪ ದಿಂದ ಬರುತ್ತದೆ ಎಂಬ ತಪ್ಪು ನಂಬಿಕೆಯನ್ನು ಹೋಗಲಾಡಿಸಿ ಇದು ಮೈಕ್ರೋ ಬ್ಯಾಕ್ಟೀರಿಯಾ ಲೆಪ್ರೆ ಎಂಬ ಸೂಕ್ಷ್ಮಾಣು ಜೀವಿಯಿಂದ ಬರುವ ಹಾಗೂ ಕಾಯಿಲೆ ಹೊಂದಿದ ವ್ಯಕ್ತಿ ಕೆಮ್ಮಿದಾಗ ಸೀನಿದಾಗ ಬ್ಯಾಕ್ಟೀರಿಯಾವು ಉಸಿರಿನ ಮೂಲಕ ಜೊತೆಯಾಗಿರುವವರಿಗೆ ದೀರ್ಘಾವಧಿಯಲ್ಲಿ ಬರುವ ಕಾಯಿಲೆಯಾಗಿದೆ. ಸ್ಪರ್ಶ ವಿಲ್ಲದ ಮಚ್ಚೆಗಳು ಕಂಡು ಬಂದರೆ ತಕ್ಷಣವೇ ವೈದ್ಯರ ಬಳಿ ಪರೀಕ್ಷೆ ಮಾಡಿಸಿ ಖಚಿತಪಡಿಸಿಕೊಳ್ಳಿ ದೇಹದ ಮೇಲಿನ ಮಚ್ಚೆಗಳ ಆಧಾರದ ಮೇಲೆ ಆರು ತಿಂಗಳಿನಿಂದ ಒಂದು ವರ್ಷ ಉಚಿತವಾದ ಚಿಕಿತ್ಸೆಯೊಂದಿಗೆ ಸಂಪೂರ್ಣ ವಾಸಿಯಾಗುತ್ತದೆ ಎಂಬುದನ್ನು ಮನವರಿಕೆ ಮಾಡಿ ಎಂದರು ನಂತರ ಬೇರೆ ಬೇರೆ ಇಲಾಖೆಯ ಸಹಯೋಗದಲ್ಲಿ ಗ್ರಾಮಗಳಲ್ಲಿ, ಶಾಲೆಗಳಲ್ಲಿ ಮಕ್ಕಳಿಗೆ, ಗ್ರಾಮ ಪಂಚಾಯತ್ ಸದಸ್ಯರಿಗೆ ಸ್ತ್ರೀಶಕ್ತಿ ಸಂಘ ಯುವಕ ಯುವತಿ ಸಂಘ ವಿವಿಧ ಸಂಸ್ಥೆಗಳ ಸದಸ್ಯರಿಗೆ ಹೆಚ್ಚಿನ ಜಾಗೃತಿ ನೀಡಿ ಎಂದ ತಿಸಿದರು. ಭೀತ್ತಿಪತ್ರ(ಪೋಸ್ಟರ್ )ಗಳನ್ನು ಬಿಡುಗಡೆಗೊಳಿಸಿ ಅತಿ ಹೆಚ್ಚು ಪ್ರಚಾರ ಮಾಡಿ ಎಂದು ತಿಳಿಸಿದರು. ನಂತರ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಅಯ್ಯನ್ ಗೌಡ ರವರು ಮಾತನಾಡಿ ಸ್ಪರ್ಶ ಕುಷ್ಟರೋಗ ಜಾಗೃತಿ ಅಭಿಯಾನದಲ್ಲಿ ದೇಹದ ಮೇಲೆ ಸ್ಪರ್ಶಜ್ಞಾನವಿಲ್ಲದ ತಿಳಿ ಬಿಳಿ ತಾಮ್ರ ವರ್ಣದ ಮಚ್ಚೆ ಗಳೆನಾದರೂ ಇದ್ದರೆ, ವೈದ್ಯರನ್ನು ಸಂಪರ್ಕ ಮಾಡಬೇಕು ಎಂದು ಹೇಳಿದರು ನಂತರ ಸ್ಪರ್ಶ ಜ್ಞಾನವಿಲ್ಲದ, ಬೆವರದೇ ಇರುವುದು, ಈ ರೋಗವು ಮುಖ್ಯವಾಗಿ ಚರ್ಮ ಹಾಗೂ ನರಗಳಿಗೆ ಸಂಬಂಧಿಸಿರುತ್ತದೆ, ಈ ರೋಗವು ಬಡವರು ಶ್ರೀಮಂತರು ಗಂಡು ಹೆಣ್ಣು ಎಂಬ ಭೇದ ಭಾವವಿಲ್ಲದೆ ಯಾರಿಗಾದರೂ ಬರಬಹುದು ರೋಗವನ್ನು ಪ್ರಾರಂಭದ ಲಕ್ಷಣಗಳಿದ್ದಾಗ ಕಂಡುಹಿಡಿದು ಚಿಕಿತ್ಸೆಗೆ ಒಳಪಡಿಸಿದರೆ ಅಂಗವಿಕಲತೆ ಆಗುವುದಿಲ್ಲ ಗುಣಮುಖ ಹೊಂದಿದ ಅಂಗವಿಕಲ ಕುಷ್ಟರೋಗಗಳನ್ನು ಆರ್‌ಸಿಎಸ್(RCS) ಚಿಕಿತ್ಸೆಯಿಂದ ಸರಿಪಡಿಸಲಾಗುವುದು ಕುಷ್ಟರೋಗವನ್ನು ಬಹು ಔಷಧೀಯ ಚಿಕಿತ್ಸೆಯು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ತೆರೆಯುತ್ತದೆ ಕ್ರಮಬದ್ಧವಾದ ಚಿಕಿತ್ಸೆ ಮತ್ತು ಸ್ವಯಂ ಆರೈಕೆಯಿಂದ ಅಂಗವಿಕಲತೆಯನ್ನು ತಡೆಗಟ್ಟಬಹುದು ಕುಷ್ಟರೋಗ ನಿರ್ಮೂಲನೆಯಲ್ಲಿ ಸಮಾಜ ಪಾತ್ರ ಮುಖ್ಯವಾಗಿರುತ್ತದೆ , ಕುಷ್ಟರೋಗದ ಬಗ್ಗೆ ವೈಜ್ಞಾನಿಕ ಸತ್ಯ ಸಂಗತಿಗಳನ್ನು ತಿಳಿದುಕೊಂಡು ಬೇರೆಯವರಿಗೆ ತಿಳಿಸುವುದು ಕುಷ್ಟರೋಗದ ಲಕ್ಷಣಗಳಿದ್ದರೆ ಗುರುತಿಸಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ಒಳಪಡಿಸುವುದು ಈ ರೋಗವನ್ನು ನಿರ್ಮೂಲನೆ ಮಾಡಲು ಜಾಗತಿಕ ಆರೋಗ್ಯ ಸಂಸ್ಥೆ ಹಾಕಿಕೊಂಡು ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡುವುದು ಕುಷ್ಟರೋಗ ಮುಕ್ತ ದೇಶವನ್ನಾಗಿಸುವ ಮಹಾತ್ಮ ಗಾಂಧೀಜಿಯವರ ಕನಸನ್ನು ನನಸಾಗಿಸುವುದು ಕುಷ್ಟರೋಗ ನಿರ್ಮೂಲನೆಗಾಗಿ ಸೇವೆ ಸಲ್ಲಿಸಿದ ಬಾಬಾ ಆ ಮಟೆ, ಮದರ್ ತೆರೆಸಾ, ಹಾಗೂ ಇತರರಂತೆ ನಾವು ನಮ್ಮ ಅಳಿಲುಸೇವೆ ಸಲ್ಲಿಸುವುದು ಎಂದು ಕುಷ್ಠ ರೋಗಿಗಳಿಗೆ ಸಮುದಾಯದಲ್ಲಿ ಪ್ರೀತಿ ವಾತ್ಸಲ್ಯ ಬೇಕು ಕುಷ್ಟರೋಗಕ್ಕೆ ತುತ್ತಾದ ವ್ಯಕ್ತಿ ಸಮಾಜಕ್ಕೆ ಬೇಕಾದ ವ್ಯಕ್ತಿ ಎಂದು ಒಪ್ಪಿಕೊಂಡು ಗೌರವದಿಂದ ಬಾಳಲು ಸಹಕರಿಸಬೇಕು ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಸದರಿ ಕಾರ್ಯಕ್ರಮದಲ್ಲಿ ತಾಲೂಕ ಮಟ್ಟದ ಎಲ್ಲಾ ಅಧಿಕಾರಿಗಳು ಚಂದ್ರಶೇಖರ್ ಅಧಿಕಾರಿಗಳು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಸಿಂಧನೂರ್, ಲಿಂಗನಗೌಡರು ಶಿಶು ಅಭಿವೃದ್ಧಿ ಅಧಿಕಾರಿಗಳು ಸಿಂಧನೂರ್, ನಗರ ಸಭೆ ಪೌರಾಯುಕ್ತರು ಪಾಂಡುರಂಗ ಇಟಗಿ, ಬಸಲಿಂಗಪ್ಪ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಅಮರ ಗುಂಡಪ್ಪ AD, L D ಅಂಗಡಿ ಸಮಾಜ ಕಲ್ಯಾಣ್ ಅಧಿಕಾರಿಗಳು ಸಿಂಧನೂರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *