ಸಿಂಧನೂರು :2025 ನೇ ಸಾಲಿನಲ್ಲಿ ಕಾರ್ಯ ಮತ್ತು ಪಾಲನೆ ಉಪ ವಿಭಾಗ, ಜೆಸ್ಕಾಂ ಸಿಂಧನೂರಿನ ಸಿಂಧನೂರು ಶಾಖೆಯನ್ನು ಅತ್ಯುತ್ತಮ ಶಾಖೆಯೆಂದು ವ್ಯವಸ್ಥಾಪಕ ನಿರ್ದೇಶಕರು, ಗುಲಬರ್ಗಾ ವಿದ್ಯುಚ್ಛಕ್ತಿ ಸರಬರಾಜು ಕಂಪನಿ ನಿಯಮಿತ ನಿಗಮದಿಂದ
ಕೃಷ್ಣ ಬಾಜಪೇಯಿ ಕಲ್ಬುರ್ಗಿರವರು ಪ್ರಶಂಶನಾ ಪತ್ರ ನೀಡಿ ಗೌರವಿಸಲಾಯಿತು.
ಗುಲ್ಬರ್ಗ ಕಾರ್ಯಾಲಯದಲ್ಲಿ 77ನೇ ಗಣರಾಜ್ಯೋತ್ಸವ ಅಂಗವಾಗಿ ಅತ್ಯುತ್ತಮ ಶಾಖೆ ಎಂದು ಪರಿಗಣಿಸಿ ಪ್ರಮಾಣ ಪತ್ರವನ್ನು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಸಿಂಧನೂರ ನಗರ ಶಾಖೆಗೆ ನಿಗಮದ ವ್ಯಾಪ್ತಿಯಲ್ಲಿ 2025ನೇ ಕ್ಯಾಲೆಂಡರ್ ವರ್ಷದಲ್ಲಿ ಅತ್ಯುತ್ತಮ ಶಾಖೆ ಎಂದು ಪರಿಗಣಿಸಿ ಈ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಸಹಾಯಕ ಅಭಿಯಂತರರಾದ ನಾಗರಾಜ ಹಾಗೂ ಶಿವಮೂರ್ತಿ ರವರನ್ನು ಎಂ ಡಿ ಕೃಷ್ಣ ಬಾಜಪೇಯಿ ಹಾಗೂ ತಾಂತ್ರಿಕ ನಿರ್ದೇಶಕರು ಚಂದ್ರಕಾಂತ್ ಪಾಟೀಲ್,ಮುಖ್ಯ ಆರ್ಥಿಕ ಅಧಿಕಾರಿ ಶಿವಶಂಕರ ಇವರಿಂದ ಸನ್ಮಾನಿಸಲಾಯಿತು.

