ನಗರದ ಬಸವೇಶ್ವರ ವೃತ್ತದ ಹತ್ತಿರವಿರುವ ಆರ್.ಜಿ.ಮೆಲೋಡಿಸ್ ಕರೋಕೆ ಸ್ಟುಡಿಯೋದಲ್ಲಿ ಸಾಹಿತಿ ಬಸವರಾಜ ಗಾಳಿ ಇವರು ರಚಿಸಿದ ಸಂಗೊಳ್ಳಿ ರಾಯಣ್ಣನ ಕುರಿತಾದ ಸಾಹಿತ್ಯವನ್ನು ತಾಲೂಕಿನ ಗೌಡನಭಾವಿಯ ಗ್ಯಾಂಗ್ ಮನ್ ಬಸಪ್ಪ ಇವರ ಧ್ವನಿಯಲ್ಲಿ ಮೂಡಿಬಂದ ಧ್ವನಿಸುರುಳಿಯ ಧ್ವನಿ ಮುದ್ರಣವನ್ನು ಬಿಜೆಪಿಯ ನಗರ ಮಂಡಲದ ಅಧ್ಯಕ್ಷರಾದ ಸಿದ್ರಾಮೇಶ ಮನ್ನಾಪೂರು ಬಿಡುಗಡೆ ಗೊಳಿಸಿದರು.

ನಂತರ ಮಾತನಾಡಿ, ಸಂಗೊಳ್ಳಿ ರಾಯಣ್ಣನವರ ವಿಚಾರಗಳು ಅವರು ನಡೆದ ಬಂದ ಕಷ್ಟದ ಆದಿಯ ಬಗ್ಗೆ ಹಂಚಿಕೊಂಡು ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವ ಗಟ್ಟಿಮನಸ್ಸಿನ ಏಂಟದೆ ಭಂಟನ ಸಾಹಸಗಾಥೆ ತುಂಬ ದೊಡ್ಡದಿದೆ. ಕಿತ್ತೂರು ರಾಣಿ ಚನ್ನಮ್ಮನ ಮಗನಾಗಿ ಕಿತ್ತೂರಿಗೆ ಸ್ವಾತಂತ್ರ್ಯ ತಂದು ಕೊಟ್ಟ ಪರಾಕ್ರಮಿ ಧೀರ, ಬಿಚ್ಚುಗತ್ತಿಯ ವೀರ, ಇವರು ಕೇವಲ ಒಂದು ಜಾತಿಗೆ ಸೀಮಿತವಾದವರಲ್ಲ ಸ್ವಾತಂತ್ರ್ಯ ಸಿಕ್ಕಿದ್ದು, ಜಾತಿ ಹೋರಾಟಗಳಿಂದಲ್ಲ. ಈ ದೇಶದ ಸ್ವಾಭಿಮಾನದ ಕಿಚ್ಚು ಹಚ್ಚಿಕೊಂಡ ವೀರ ಶೂರರಿಂದ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ಶ್ರಮಿಸಿದ ರಾಯಣ್ಣನನ್ನು ತಮ್ಮ ಬರವಣಿಗೆ ಮೂಲಕ ಹಿತನುಡಿಗಳಲ್ಲಿ ಸ್ಮರಿಸುತ್ತಾ ಅಂತಹ ಮಹಾನ್ ವ್ಯಕ್ತಿಯ ಗೀತೆ ರಚನಾಕಾರರಿಗೂ ಗಾಯಕರಿಗೂ ಅಭಿನಂದನೆಗಳು ಸಲ್ಲಿಸಿದರು.

ತದನಂತರ ನಿವೃತ್ತ ಶಿಕ್ಷಕರಾದ ವೆಂಕನಗೌಡ ವಟಗಲ್ ಮಾತಾನಾಡಿ, ಸಿಂಧನೂರಿನಲ್ಲಿ ಸಂಗೀತ, ಸಾಹಿತ್ಯ, ಶಿಕ್ಷಣ, ಹಾಗೂ ಇತರೆ ಎಲ್ಲಾ ಕ್ಷೇತ್ರದಲ್ಲಿ ಪ್ರತಿಭೆಗಳಿವೆ ಸಮಯಕ್ಕೆ ಸರಿಯಾಗಿ ಮಾರ್ಗದರ್ಶನ ಸಲಹೆ ಸಹಕಾರ ಕಲಾವಿದರಿಗೆ ಬೇಕಾಗಿದೆ. ಹಳ್ಳಿಪ್ರತಿಭೆಗಳು ಪಟ್ಟಣದಲ್ಲಿ ಗೂಡು ಕಟ್ಟಿಕೊಳ್ಳಲು ಹಳ್ಳಿಯಿಂದ ದಿಲ್ಲಿಯವರೆಗೆ ತಮ್ಮ ಪ್ರತಿಭೆಯ ಪ್ರದರ್ಶನಕ್ಕಾಗಿ ಹರಸಹಾಸ ಮಾಡುತ್ತಿದ್ದಾರೆ. ಸಂಗೀತ ಸಾಹಿತ್ಯ ಕಲೆಯ ಆಸಕ್ತರಿಗೆ ನೆರವು ನೆರಳು ಬೇಕಾಗಿದೆ. ಸಂಬಂಧಿಸಿದ ಅಧಿಕಾರಿಗಳು ಜನಪ್ರತಿನಿಧಿಗಳು ಗಮನ ಹರಿಸಬೇಕು ಎಂದರು.

ಈ ಸಂದರ್ಭದಲ್ಲಿ: ಮುಖಂಡರಾದ ಶೇಖರಪ್ಪ ಸುಕಾಲಪೇಟೆ, ಆರ್.ಜಿ.ಮೆಲೋಡಿಸ್ ಕರೋಕೆ ಸ್ಟುಡಿಯೋ ಸಂಸ್ಥಾಪಕರಾದ ಉಮಾ ವೀರೇಶ ದೇವರಮನಿ, ನರಸಮ್ಮ, ಭಜನಾ ಕಲಾವಿದರಾದ ತಿಮ್ಮಣ್ಣ ಸಾಗರಕ್ಯಾಂಪ್, ಅಮರೇಶ ದಿದ್ದಿಗಿ, ಬಸವರಾಜ ಕೋಳಬಾಳ, ರಮೇಶ, ಗುರುರಾಜ, ಶ್ಯಾಮೀದ್, ಸಲೀಮ್, ಖಾಸಿಂ, ಮಲ್ಲಯ್ಯಸ್ವಾಮಿ ಮುಳ್ಳೂರು, ಸೇರಿದಂತೆ ಅನೇಕ ಕಲಾವಿದರು, ಹಿರಿಯರು ಭಾಗವಹಿಸಿದ್ದರು. ವೀರೇಶ ದೇವರಮನಿ ನಿರೂಪಿಸಿದರು.

Leave a Reply

Your email address will not be published. Required fields are marked *