ಕ್ರೀಡೆಯಲ್ಲಿ ಗ್ರಾಮೀಣ ಪ್ರತಿಭೆಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡು ಜಿಲ್ಲೆ, ತಾಲೂಕು, ತಮ್ಮ ಊರಿನ ಹೆಸರನ್ನು ಉಳಿಸುವಂತಾಗಬೇಕು
ಯುವಕರು ಕ್ರೀಡಾ ಚಟುವಟಿಕೆಗಳಲ್ಲಿ ಅತಿ ಹೆಚ್ಚು ತೊಡಗಿಕೊಳ್ಳುವುದರಿಂದ ಜೀವನದಲ್ಲಿ ಶಿಸ್ತು ಮತ್ತು ಗುರಿ ತಲುಪುವ ಛಲ ಮೂಡುತ್ತದೆಂದು ವಿರುಪಾಪುರ ಜಿಲ್ಲಾ ಪಂಚಾಯತಿ ಮೀಸಲು ಕ್ಷೇತ್ರದ ಆಕಾಂಕ್ಷಿಯಾದ ವೀರೇಶ ಎನ್.ಉಪ್ಪಲದೊಡ್ಡಿ ಕರೆ ನೀಡಿದರು.
ಸಿಂಧನೂರು ತಾಲೂಕಿನ ಮಸ್ಕಿ ವಿಧಾನ ಸಭಾ ಕ್ಷೇತ್ರದ ಅರಳಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಸ್ಪರ್ಧಾರ್ಥಿಗಳಾಗಿ ಭಾಗವಹಿಸಿದ್ದ ಎಲ್ಲಾ ಕ್ರೀಡಾ ಪಟುಗಳಿಗೆ ಉಚಿತವಾಗಿ ಟಿ-ಶರ್ಟ್ ವಿತರಿಸಿ, ಕಬಡ್ಡಿ ಪಂದ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾರತ ದೇಶ ಯುವಕರ ದೇಶ ಸಮಾಜದ ಕೊಂಡಿ ಇದ್ದಹಾಗೆ, ಪ್ರತಿಯೊಬ್ಬರಲ್ಲೂ ಕೂಡ ಕ್ರೀಡಾ ಮನೋಭಾವನೆ ಬರಬೇಕು. ಇಲ್ಲಿ ಸೋಲು-ಗೆಲುವು ಮುಖ್ಯವಲ್ಲ ಸ್ಪರ್ಧೆಯಲ್ಲಿ ಭಾಗವಹಿಸುವಿಕೆ ಬಹಳ ಮುಖ್ಯ,
ಈ ದಿಶೆಯಲ್ಲಿ ಕ್ರೀಡಾ ಮನೋಭಾವ ಬೆಳಸಿಕೊಳ್ಳಿ, ಸಮಾಜಕ್ಕೆ ಮಾದರಿಯಾಗಿ ಕಲಿತ ಶಾಲೆಗೆ ಶಿಕ್ಷಕರಿಗೆ ಹೆಸರು ತನ್ನಿ, ತಂದೆ-ತಾಯಿ ಆರ್ಶೀವಾದ ಪಡೆದುಕೊಳ್ಳಿ ಈ ಪ್ರಜಾಪ್ರಭುತ್ವದಲ್ಲಿ ಉತ್ತಮರಾಗಿ ಬಾಳಿ ಬದುಕಿ, ಹಿರಿಯರನ್ನ ಪೂಜಿಸಿ, ದುಡಿಯುವ ವರ್ಗಕ್ಕೆ, ರೈತರಿಗೆ, ಗೌರವಕೊಡಿ ಎಂದರು. ಈ ವೇಳೆ: ಕ್ರೀಡಾಪಟುಗಳು, ಗ್ರಾಮದ ಮುಖಂಡರು, ಮಹಿಳೆಯರು, ಪಾಲಕರು, ಆಗಮಿಸಿ ಕ್ರೀಡಾ ಪಟುಗಳಿಗೆ ಪ್ರೋತ್ಸಾಹಿಸಿದರು.

