ಪವಿತ್ರ ಕುಟುಂಬವಾದ ಹೋಲಿ ಫ್ಯಾಮಿಲಿ ಚರ್ಚ್ ನ ಪವಿತ್ರ ದೇವಾಲಯದ ವಾರ್ಷಿಕೋತ್ಸವದ ಹಬ್ಬ ಈ ಹಬ್ಬದ ಪ್ರಯುಕ್ತ ನಗರದ ಪ್ರಮುಖ ಬೀದಿಗಳಲ್ಲಿ ಪವಿತ್ರ ಕುಟುಂಬದ ಕ್ರಿಸ್ತ ಯೇಸು, ಸಂತ ಜೋಸೆಫ್, ಹಾಗೂ ಮಾತೆ ಮರಿಯಾ ತೇರ, ಅವರ ಪ್ರತಿಮೆ ಗಳೊಂದಿಗೆ ಭವ್ಯ ಮೆರವಣಿಗೆ ಆಯೋಜಿಸಲಾಗಿತ್ತು. ಭಕ್ತರು ಭಜನೆ ಪ್ರಾರ್ಥನೆಗಳೊಂದಿಗೆ ಪಾಲ್ಗೊಂಡಿದ್ದರು.
ಈ ಮೆರವಣಿಗೆ ನಂತರ ಹಬ್ಬದ ವಿಶೇಷ ದಿವ್ಯ ಬಲಿ ಪೂಜೆಯನ್ನು ಅರ್ಪಿಸಲಾಯಿತು. ಈ ಪೂಜೆಗೆ ಸಿಂಧನೂರು ವಲಯದ ಶ್ರೇಷ್ಠ ಗುರುಗಳಾದ ಫಾದರ್ ಜ್ಞಾನಪ್ರಕಾಶ್ ಅವರು ನೇತೃತ್ವ ವಹಿಸಿದ್ದರು. ಇದೇ ವೇಳೆ ಸಿಂಧನೂರು ಮತ್ತು ಬಳ್ಳಾರಿ ಧರ್ಮಪ್ರಾಂತ್ಯದ ಅನೇಕ ಗುರುಗಳು ಪೂಜೆಯಲ್ಲಿ ಭಾಗವಹಿಸಿದ್ದರು.
ಪೂಜೆಯ ನಂತರ ಭಕ್ತರಿಗೆ ಮಹಾಪ್ರಸಾದವನ್ನು ವಿತರಿಸಲಾಯಿತು. ಈ ಹಬ್ಬದ ಆಚರಣೆಯಿಂದ ಸಮುದಾಯದಲ್ಲಿ ಆಧ್ಯಾತ್ಮಿಕ, ಉತ್ಸಾಹ, ಮತ್ತು ಐಕ್ಯತೆಯನ್ನು ಹೆಚ್ಚಿಸಿತು.

