ಹಾಲಾಪೂರ ಗ್ರಾಮದಲ್ಲಿರುವ ಮಸ್ಕಿ ಪತ್ತಿನ ಸೌಹಾರ್ದ ಸಹಕಾರಿ ಸಂಘದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಅಧ್ಯಕ್ಷ ತಿರುಪತಿ ಜಂಗಮರಳ್ಳಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಭಾರತವು ಪ್ರಜಾಪ್ರಭುತ್ವದ ಜನ್ಮಸ್ಥಳ, ರಾಜಪ್ರಭುತ್ವ, ಅರಸುತ್ತಿಗೆ ವ್ಯವಸ್ಥೆಯಿಂದ ಮುಕ್ತಗೊಳಿಸಲಾಯಿತು, ಭಾರತವು ವಿಶ್ವದಲ್ಲಿಯೇ ಅತ್ಯಂತ ಬೃಹತ್ತಾದ ಸಂವಿಧಾನ ಹೊಂದಿರುವ ದೇಶ, ನಮ್ಮ ಸಂವಿಧಾನದಲ್ಲಿ ಪ್ರತಿಪಾದಿಸಿದ ನ್ಯಾಯ,ಭ್ರಾತೃತ್ವ, ಸಹೋದರತ್ವ ಎಲ್ಲಾ ಆದರ್ಶಗಳು ಸಂವಿಧಾನದಲ್ಲಿ ಉಲ್ಲೇಖಿತವಾಗಿದ್ದು ಆದ್ದರಿಂದ ನಾವು ಸಂವಿಧಾನವನ್ನು ಗೌರವಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಅಮರೇಶ ಪಾಟೀಲ್, ವೆಂಕಟೇಶ್ ಸಾಹುಕಾರ, ಅಮರೇಶ ವಾಯ್, ಮೌನೇಶ ವಟಗಲ, ಸಿದ್ದಾರ್ಥ ಪೊ. ಪಾಟೀಲ್, ಸಿದ್ದು ಬಿ , ವ್ಯವಸ್ಥಾಪಕರಾದ ಶರತಕುಮಾರ ಮಸ್ಕಿ, ಅನುಷಾ , ಬಸವರಾಜ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *