ತಾಳಿಕೋಟಿ: ತಾಲೂಕಿನ ಶಳ್ಳಗಿ ಗ್ರಾಮದ ಸಮಾಜ ಸೇವಕರಾದ ಸುರೇಶಗೌಡ ಕಲ್ಯಾಣದಪ್ಪಗೌಡ ನಾಡಗೌಡ ಹಾಗೂ ಅವರ ಧರ್ಮಪತ್ನಿ ಸುಮಿತ್ರಾಗೌಡಶಾನಿ ಸುರೇಶಗೌಡ ನಾಡಗೌಡ ಅವರನ್ನು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಶಾಲೆಯ ವತಿಯಿಂದ ಸನ್ಮಾನಿಸಿ ಗೌರವ ಸಮರ್ಪಣೆ ಸಲ್ಲಿಸಲಾಯಿತು. ಗ್ರಾಮದಲ್ಲಿ ನಡೆಯುವ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಸೇವಾ ಕಾರ್ಯಗಳಿಗೆ ಸದಾ ಆರ್ಥಿಕ ಸಹಾಯ ನೀಡುವ ಇವರು ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ರೂ 1,30,000 ವೆಚ್ಚದಲ್ಲಿ ಸುಸಜ್ಜಿತವಾದ ವೇದಿಕೆಯನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ಬಿ.ಸಿ.ಗೋಗಿ, ಗ್ರಾಮದ ಪ್ರಮುಖರಾದ ಕಾಶಿರಾಯಗೌಡ ದೇಸಾಯಿ, ಪ್ರಭುಗೌಡ ಚಿಂಚೋಳ್ಳಿ, ಗ್ರಾ.ಪಂ ಸದಸ್ಯ ಜೈಪಾಲ ರೆಡ್ಡಿ ಬಂಟನೂರ, ಬಸವಂತರಾಯ ಚೌದ್ರಿ,ನಿಂಗಣ್ಣ ಹೊಸಮನಿ, ಬಂಡೆಪ್ಪ ಕೋರಿ, ಬಸವರಾಜ ನಾಯ್ಕಲ್, ಆದಣ್ಣ ಸಜ್ಜನ,ಹಾರೂನ ಖಾಜಿ, ಶಿಕ್ಷಕರಾದ ಕೆ.ಕೆ.ಅಸ್ಕಿ, ಆರ್.ಎಂ.ಚೌದರಿ, ಸಿ.ಬಿ.ಗುಡ್ಡದ, ಬಿ.ವೈ ಜಟ್ಟಗಿ, ಕಿರಣಕುಮಾರ ಎನ್ಕೆ, ಅಂಗನವಾಡಿ ಕಾರ್ಯಕರ್ತೆ ಗುರುಬಸಮ್ಮ ಆರ್.ಚೌಧರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

