ಅರಕೇರಾ :
ದಿನಾಂಕ 25 ಜನವರಿ 2026 ರಂದು ಪಟ್ಟಣದ ಖೇಣೇದ್ ಫಂಕ್ಷನ್ ಹಾಲಲ್ಲಿ ನಡೆದ
ದೇವದುರ್ಗ ತಾಲೂಕು ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘಕ್ಕೆ ನೂತನ ಪಧಾಧಿಕಾರಿಗಳ ಪುನಾರಚನೆ ಮಾಡಿ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಪ್ರಕಾಶ ಖೇಣೇದ್, ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಪಾಟೀಲ್ ಅಮರಾಪುರ, ಉಪಾಧ್ಯಕ್ಷರಾಗಿ ಶರಣಗೌಡ ಮಾ. ಪಾ. ಬಿ. ಗಣೇಕಲ್, ವಿರೂಪಾಕ್ಷಪ್ಪ ಸಾಹುಕಾರ ಬಳೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಶೇಖರ ವಿಭೂತಿ ವಕೀಲರು ಇವರನ್ನು ದೇವದುರ್ಗ ತಾಲೂಕು ಸರ್ವ ಬಣಜಿಗ ಸಮಾಜದ ಸದಸ್ಯರು ಸೇರಿ ಆಯ್ಕೆ ಮಾಡಲಾಯಿತು,
ಸಮಾಜದ ಸಂಘಟನೆ ಹಾಗೂ ದ್ವನಿಯಾಗಿ ಕೆಲಸ ಮಾಡಲು ನೂತನ ಅಧ್ಯಕ್ಷರಿಗೆ ಶುಭ ಕೋರಿ ತಿಳಿಸಲಾಯಿತು,,
ವಿಶೇಷ ಅತಿಥಿಯಾಗಿ ಸಿದ್ರಾಮಪ್ಪ ಕಾಡ್ಲೂರು ರಾಜ್ಯ ಬಣಜಿಗ ಸಮಾಜದ ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಿದ್ದರು,
ಸಭೆಯಲ್ಲಿ ಬಸವರಾಜಪ್ಪ ವಾರದ, ಬಸವರಾಜಪ್ಪ ಅಮರಾಪುರ,, ಶಿವರಾಜಪ್ಪ ಚಿಕ್ಕಬುದೂರು,, ಶರಣಪ್ಪ ಪಡಶೆಟ್ಟಿ, ಶಶಿಕಾಂತ ಜಾಲಹಳ್ಳಿ ಶರಣು ರಾಮದುರ್ಗ, ಶರಣು ಕೋರಿ, ರಾಜಪ್ಪ ಕೋರಿ, ಬಸವರಾಜ್ ಯಾಟಗಲ್, ಶಿವಕುಮಾರ್ ಹರವಿ , ಬಣಜಿಗ ಸಮಾಜದ ಗಣ್ಯರು ಹಿರಿಯರು ಯುವಕರು ಉಪಸ್ಥಿತರಿದ್ದರು.


