ಅರಕೇರಾ :
ತಾಲೂಕಿನ ಗೆಜ್ಜೆ ಭಾವಿ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ 77 ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಜರುಗಿತು.
ಯುವ ಟೀಮವತಿಯಿಂದ ಗಣರಾಜ್ಯೋತ್ಸವ ಅಂಗವಾಗಿ ಶಾಲಾಮಕ್ಕಳಿಗೆ ಆಟೋಟ ಸ್ಪರ್ಧೆಗಳು.ಚಿತ್ರಕಲಾಸ್ಪರ್ಧೆ.ಬಾಷಣಸ್ಪರ್ದೆ.ರಸಪ್ರಶ್ನೆಗಳನ್ನು ಏರ್ಪಡಿಸಿದ್ದರು.ವಿಜೆತರಾದ ಮಕ್ಕಳಿಗೆ ಬಹುಮಾನವನ್ನು ನೋಟಬುಕ್.ಪೇನ್ನು.ಬಾಗ್ಯ
ವಿತರಿಸಲಾಯಿತು .
ಕಾರ್ಯಕ್ರಮದಲ್ಲಿ ರೆಡ್ಡೆಪ್ಪ ಭೊವಿಗ್ರಾಮಪಂಚಾಯತ್ ಸದಸ್ಯರು ಮಾತನಾಡಿ ಯುವ ಟೀಮನವರು ಶಾಲಾಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಮಕ್ಕಳಿಗೆ ಸ್ಪೂರ್ತಿ ತುಂಬಿದ್ದಾರೆ.ಅಲ್ಲದೇ ಮಕ್ಕಳ ಶೈಕ್ಷಣಿಕವಾಗಿ ಮುಂದೆ ಬರಲು ಸಹಕಾರಿಯಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷರಾದ ಸಿದ್ದನಗೌಡ ಮುಖ್ಯಗುರು ವಹಿಸಿದ್ದರು.
ಸಂದರ್ಭದಲ್ಲಿ ಮುಸ್ಟೂರು ಗ್ರಾಮಪಂಚಾಯತ್ ಮಾಜಿ ಗ್ರಾಮಪಂಚಾಯತ್ ಅಧ್ಯಕ್ಷರಾದ ತೇಜರಾಜನಾಯಕ .ಎಸ್ ಡಿ ಎಂ ಸಿ ಅಧ್ಯಕ್ಷರಾದ
ಚನ್ನಪ್ಪ ದೊರೆ. ಎಸ್ ಡಿ ಎಂ ಸಿ ಸರ್ವಸದಸ್ಯರು.ಯುವಟೀಮಬಳಗದವರು ಗ್ರಾಮದ ಯುವಕರು ಮತ್ತು ಶಿಕ್ಷಕರು ಗ್ರಾಮಸ್ಥರು ಭಾಗವಹಿಸಿದ್ದರು

Leave a Reply

Your email address will not be published. Required fields are marked *