ಮಾನ್ವಿ: ಪಟ್ಟಣದ ಎ.ಪಿ.ಎಂ.ಸಿ. ಬಯಲು ಸಭಾಂಗಣದಲ್ಲಿ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಮತ್ತು ತಾಲೂಕು ಘಟಕದ ವತಿಯಿಂದ ನಡೆದ ಸ್ವಾಭಿಮಾನಿ ಕನ್ನಡಿಗನ ಹಬ್ಬ ಕಾರ್ಯಕ್ರಮವನ್ನು ಚಿಕಲಪರ್ವಿಯ ಶ್ರೀ ಸದಾಶಿವ ಮಹಾಸ್ವಾಮಿಗಳು ಉದ್ಘಾಟಿಸಿ ಆರ್ಶೀವಾಚನ ನೀಡಿ ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡ ಭಾಷೆ ಕೂಡ ಒಂದು ಇಂತಹ ಸಮೃದ್ದ ಭಾಷ ಪರಂಪರೆಯನ್ನು ನಾವೇಲ್ಲರು ಕೂಡ ಉಳಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೋಬ್ಬರ ಮೇಲಿದೆ ರಾಜ್ಯದಾಧ್ಯಂತ ನವಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದರೆ ಬೆಳಗಾವಿಯಲ್ಲಿ ಕರಾಳದಿನವಾಗಿ ಆಚರಿಸಲಾಗುತ್ತದೆ ಇದ್ದಕ್ಕೆ ನಮ್ಮ ಸರ್ಕಾರ ಗಡಿ ಭಾಗದ ಕನ್ನಡಿಗರಿಗೆ ಹೆಚ್ಚಿನ ಅದ್ಯತೆ ಸೌಲಭ್ಯ ಕಲ್ಪಿಸದೆ ಇರುವುದೆ ಕಾರಣವಾಗಿದೆ ನಮ್ಮ ಜಿಲ್ಲೆ ಆಂಧ್ರ ಗಡಿಯನ್ನು ಹಂಚಿಕೊAಡಿದ್ದರು ಕೂಡ ಕನ್ನಡ ಭಾಷಿಕರ ಸಂಖ್ಯೆ ಹೆಚ್ಚಾಗಿದೆ ಅದ್ದರಿಂದ ಸರ್ಕಾರ ಹಾಗೂ ಕನ್ನಡ ಪರ ಸಂಘಟನೆಗಳು ಗಡಿ ಭಾಗದಲ್ಲಿ ಹೆಚ್ಚು ಹೆಚ್ಚು ಇಂತಹ ಕನ್ನಡ ಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಮಾತ್ರ ಗಡಿ ಸಮಸ್ಯೆ ಬರುವುದಿಲ್ಲ ಎರಡು ರಾಜ್ಯಗಳ ನಡುವೆ ಸೌಹಾರ್ದತೆ ಉಳಿಯುತ್ತದೆ ಎಂದು ತಿಳಿಸಿದರು.
ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಎಂ.ಬಿ.ಮಹೇಶಕುಮಾರ ಮಾತನಾಡಿ ನಮ್ಮ ಸಂಘಟನೆ ರಾಜ್ಯದಲ್ಲಿ ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕನ್ನಡಿಗರನ್ನು ಸಂಘಟಿಸಿ ನಾಡು,ನುಡಿ,ಭಾಷೆಯ ಉಳಿವಿಗಾಗಿ ಹೋರಾಟ ನಡೆಸಲಾಗುವುದು. ರಾಜ್ಯದಲ್ಲಿ ಕನ್ನಡಿಗರಿಗೆ ಮೊದಲ ಅದ್ಯತೆ ದೊರೆಯಬೇಕು, ಖಾಸಗಿ ಹಾಗೂ ಸರಕಾರಿ ಉದ್ಯೋಗದಲ್ಲಿ ಕನ್ನಡಿಗರಿಗೆ ಹೆಚ್ಚಿನ ಅದ್ಯತೆ ದೊರೆಯಬೇಕು ಪರ ರಾಜ್ಯಗಳಿಂದ ಬಂದವರು ಇಂದು ರಾಜ್ಯದಲ್ಲಿ ಹೆಚ್ಚಿನ ಅಧಿಪತ್ಯ ನಡೆಸುವುದಕ್ಕೆ ನಮ್ಮ ಸಂಘಟನೆ ಅವಕಾಶ ನೀಡುವುದಿಲ್ಲ ನಿತ್ಯ ಕನ್ನಡಕ್ಕಾಗಿ ನಮ್ಮ ಸಂಘಟನೆ ಶ್ರಮಿಸುತ್ತದೆ ಎಂದು ತಿಳಿಸಿದರು.
ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಜೀಶನ್ ಸಿದ್ದಿಕಿ, ಜೀವನ ಕೌಶಲ್ಯ ಸಂಪನ್ಮೂಲ ವ್ಯಕ್ತಿಗಳಾದ ಗಿರಿಧರ ಪೂಜಾರಿ, ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರಾದ ಡಿಂಗ್ರಿ ನರೇಶ, ಹನುಮಂತ ಭಜಂತ್ರಿ, ಶಾಮಣ್ಣ ಖಾನಪೂರ ರವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಪಟ್ಟಣದ ಬಸವವೃತ್ತದಿಂದ ಎ.ಪಿ. ಎಂ.ಸಿ. ಬಯಲು ಸಭಾಂಗಣದವರೆಗೆ ನಾಡದೇವಿ ಭುವನೇಶ್ವರಿ ಮಾತೆಯ ಭಾವಚಿತ್ರ ಭವ್ಯ ಮೆರವಣಿಗೆ ವಿವಿಧ ಕಲಾ ತಂಡಗಳೊAದಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ತಾ. ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಹರಿಹಾರ ಪಾಟೀಲ್, ಮುಖಂಡರಾದ ಶರಣಪ್ಪಗೌಡ ನಕ್ಕುಂದಿ, ವಿಜಯ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಹೇಮಾ ರಾಜೇಂದ್ರ, ರಾಜ್ಯ ಸಂ, ಕಾರ್ಯದರ್ಶಿ ಡಿ.ವಿ.ಸುಭ್ರಮಣ್ಯ ,ಜಿಲ್ಲಾಧ್ಯಕ್ಷರಾದ ಅಂಬಾಜಿ ರಾವ್, ಕಾರ್ಯಧ್ಯಕ್ಷರಾದ ಆನಂದಸ್ವಾಮಿ, ತಾ.ಅಧ್ಯಕ್ಷ ಭೀಮಣ್ಣ ಮುದಗಲ್,ಉಪಾಧ್ಯಕ್ಷರಾದ ಶೇಖರಗೌಡ, ಪ್ರ.ಕಾರ್ಯದರ್ಶಿ ಗಿರಿನಾಯಕ, ವೀರಭದ್ರಯ್ಯಸ್ವಾಮಿ, ಮನೋಹರ್ ಆಚಾರ್ಯ,ನಾಗರಾಜ ನಾಯಕ, ರಮೇಶನಾಯಕ, ಅಮರೇಶಗೌಡ ಸೇರಿದಂತೆ ಇನ್ನಿತರರು ಇದ್ದರು.
22-ಮಾನ್ವಿ-1:
ಮಾನ್ವಿ: ಪಟ್ಟಣದಲ್ಲಿ ನಡೆದ ಸ್ವಾಭಿಮಾನಿ ಕನ್ನಡಿಗನ ಹಬ್ಬ ಕಾರ್ಯಕ್ರಮವನ್ನು ಚಿಕಲಪರ್ವಿಯ ಶ್ರೀ ಸದಾಶಿವ ಮಹಾಸ್ವಾಮಿಗಳು ಉದ್ಘಾಟಿಸಿದರು.
22-ಮಾನ್ವಿ-2:
ಮಾನ್ವಿ: ಪಟ್ಟಣದಲ್ಲಿ ನಡೆದ ಸ್ವಾಭಿಮಾನಿ ಕನ್ನಡಿಗನ ಹಬ್ಬ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಿದರು.

Leave a Reply

Your email address will not be published. Required fields are marked *