ಸಂಯುಕ್ತ ಹೋರಾಟ ಕರ್ನಾಟಕ ವತಿಯಿಂದ ನ.26 ರಂದು ಕಾರ್ಮಿಕರ ವಿವಿಧ 15 ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯವ್ಯಾಪಿ ಬೃಹತ್ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆ ಮುಖಂಡರು ಹಾಗೂ ಕೃಷಿ ಬೆಲೆ ಆಯೋಗದ ಸದಸ್ಯರಾದ ಡಿ.ಎಚ್.ಪೂಜಾರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಕೊಟ್ಟಂತಹ ಭರವಸೆಗಳ ಬಗ್ಗೆ ನ.26 ಸಂವಿಧಾನ ದಿನದಂದು ಸಂಬಂಧಪಟ್ಟ ಸಚಿವರು ಸ್ಪಷ್ಟ ನಿರ್ಧಾರ ಕೊಡಬೇಕು. ರೈತರ, ಕಾರ್ಮಿಕರ, ಮಹಿಳೆಯರ, ದುಡಿಯುವ ವರ್ಗದ ವಿರೋಧಿ ಪಕ್ಷವಾದ ಬಿಜೆಪಿ ಪಕ್ಷವನ್ನು ಜನ ತಿರಸ್ಕರಿಸಿ, ಜನ ಕಾಂಗ್ರೆಸ್ಸಿಗೆ ಅಧಿಕಾರ
ಕೊಟ್ಟಿದ್ದಾರೆ. ಅಧಿಕಾರ ಅನುಭವಸುತ್ತಿರುವ ಕಾಂಗ್ರೆಸ್ ಪಕ್ಷ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಬಗರ್ ಹುಕುಂ ವಿಷಯವಾಗಿ ರೈತರಿಗೆ ಒನ್ ಟೈಮ್ ಸೆಟಲಮೆಂಟ್ ಭೂಮಿ ಮಂಜೂರು ಮಾಡಬೇಕು. ಬೆಂಬಲ ಬೆಲೆ ಘೋಷಣೆ ಮಾಡಬೇಕು. ಮೈಕ್ರೋ ಫೈನಾನ್ಸ್‌ಗಳಿಂದ ಸಾಲ ಕಿರಿಕಿರಿಕೊಡದಂತೆ ಆದೇಶ ಮಾಡಬೇಕು. ವಿದ್ಯುತ್ ಖಾಸಗೀಕರಣ ಆಗಬಾರದು, ಕಾರ್ಮಿಕರಿಗೆ 8 ಗಂಟೆ ಕೆಲಸ ಮಾಡಿಸಬೇಕು. ಮತ್ತು ಹೆಚ್ಚುವರಿ ಕೆಲಸಕ್ಕೆ ದುಪ್ಪಟ್ಟು ಹಣ ಕೊಡಬೇಕು. ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂಬ ಅನೇಕ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಳುವಳಿ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಬಿ.ಎನ್.ಯರದಿಹಾಳ, ಚಿಟ್ಟಿಬಾಬು, ರಮೇಶ್ ಪಾಟೀಲ್ ಬೇರ್ಗಿ, ಬಸಲಿಂಗಪ್ಪ, ಅಪ್ಪಣ್ಣ ಜಾಲಿಹಾಳ, ಎಚ್.ವಿರುಪಾಕ್ಷಗೌಡ, ಚಂದ್ರಶೇಖರ್ ಕ್ಯಾತ್ನಟ್ಟಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

