ಮಾನ್ವಿ : ಪಟ್ಟಣದ ಪುರಸಭೆ ಕಚೇರಿಗಳಲ್ಲಿ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಶ್ರದ್ಧೆ ಮತ್ತು ದೇಶಭಕ್ತಿಯಿಂದ ಆಚರಿಸಲಾಯಿತು. ಸಂವಿಧಾನ ಶಿಲ್ಪಿ ಹಾಗೂ ರಾಷ್ಟ್ರಪಿತನ ಸ್ಮರಣೆಯೊಂದಿಗೆ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಜರುಗಿದವು.
ಪುರಸಭೆ ಕಚೇರಿ ಆವರಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಭಾರತ ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ, ವಿಶೇಷ ಪೂಜೆ ನೆರವೇರಿಸಲಾಯಿತು.
ಬಳಿಕ ಪುರಸಭೆಯ ಮುಖ್ಯಾಧಿಕಾರಿ ಪರಶುರಾಮ್ ದೇವಾಮನೆ ರಾಷ್ಟ್ರಧ್ವಜವನ್ನು ಹಾರಿಸಿ, ಗೌರವ ವಂದನೆ ಸಲ್ಲಿಸಿ. 77ನೇ ಗಣರಾಜ್ಯೋತ್ಸವ ಶುಭಾಶಯಯನ್ನು ತಿಳಿಸಿದರು ನಂತರ ಮಾತಾಡಿದ ಗಣ್ಯರು. ಸಂವಿಧಾನ ನಮಗೆ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಸಮಾನವಾಗಿ ಪಾಲಿಸಿದಾಗ ಮಾತ್ರ ಗಣರಾಜ್ಯೋತ್ಸವಕ್ಕೆ ಅರ್ಥ ಎಂದರು.
ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷರಾದ ಅಬ್ದುಲ್ ಗಫರ್ ಸಾಬ್, ಮುಖಂಡರಾದ ಸೈಯದ್ ಖಾಲಿದ್ ಖಾದ್ರಿ, ಮಾಜಿ ಪುರಸಭೆ ಅಧ್ಯಕ್ಷ ಎಂ ಡಿ ಇಸ್ಮಾಯಿಲ್, ಪುರಸಭೆ ಸದಸ್ಯರಾದ ಅಮ್ಜದ್ ಖಾನ್, ಸಬ್ಜಲಿ ಶಾಖಾ, ಜಿಲಾನಿ ಖುರೇಶಿ, ನಾಮನಿರ್ದೇಶಿತ ಸದಸ್ಯರಾದ ಕಾಮೇಶ, ಹಂಪಯ್ಯ ನಾಯಕ ಸೇರಿದಂತೆ ಪುರಸಭೆ ಸದಸ್ಯರು, ಸಿಬ್ಬಂದಿಗಳು, ಪೌರಕಾರ್ಮಿಕರು ಮತ್ತು ಸ್ಥಳೀಯರು ಇದ್ದರು.

