ಕವಿತಾಳ : ಪಟ್ಟದ ವಿವಿಧ ಸರ್ಕಾರಿ ಶಾಲಾ,ಕಾಲೇಜು, ಪೊಲೀಸ್ ಠಾಣೆ, ಆಸ್ಪತ್ರೆ,ಸಹಕಾರಿ ಸಂಘಗಳು ಸೇರಿದಮತೆ ಇನ್ನಿತರ ಖಾಸಗಿ ಶಾಲಾ ಸಂಸ್ಥೆಗಳಲ್ಲಿ ಸಂಭ್ರಮದಿಂದ ೭೭ನೇ ಗಣರಾಜ್ಯೋತ್ಸವವನ್ನು ಆಚರಣೆ ಮಾಡಲಾಯಿತು.
ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಗುರುಚಂದ್ರ ಯಾದವ್ ಮಹಾತ್ಮ ಗಾಂದೀಜಿ, ಡಾ.ಅಂಬೇಡ್ಕರ್ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣವರ ಭಾವಚಿತ್ರ ನಮನ ಸಲ್ಲಿಸಿ ದ್ವಜಾರೋಹಣವನ್ನು ನೆರವೇರಿಸಿದರು.
ನಂತರ ಮಾತನಾಡಿದ ಅವರು `ನಮ್ಮ ದೇಶಕ್ಕೆ ಸ್ವತಂತ್ರವು ಮಹನೀಯರ ಬಲಿದಾನದ ಫಲವಾಗಿ ದೊರಕಿದ್ದು ನಾವುಗಳು ಭಾವೈಕ್ಯತೆಯಿಂದ ಜೀವನ ನಡೆಸುವ ಮೂಲಕ ಅವರ ಪರೀಶ್ರಮಕ್ಕೆ ದಕ್ಕೆ ಬರದಂತೆ ನೋಡಕೊಳ್ಳಬೇಕಾಗಿದೆ’ ಎಂದರು.
`ನಾನ್ನ ಸೇವಾ ಅವಧಿಯು ಮುಗಿಯುವ ಹಂತದಲ್ಲಿದ್ದು ಈ ಸಂಧರ್ಭದಲ್ಲಿ ನಮ್ಮ ಕವಿತಾಳ ಠಾಣೆಗೆ ದೇಶದ ಉತ್ತಮ ಠಾಣೆ ಎಂಬ ಪ್ರಶಸ್ತಿ ದೊರಕಿದ್ದು ನನ್ನ ಸುದೈವ ಈ ಪ್ರಶಸ್ತಿಯು ಈ ಹಿಂದೆ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳಿಗೂ ಮತ್ತು ಸಿಬ್ಬಂದಿ ವರ್ಗದ ಕಾರ್ಯಕ್ಷಮತೆಯ, ಅಷ್ಟೆ ಅಲ್ಲದೆ ಕವಿತಾಳ ಪಟ್ಟಣದ ಜನತೆಯ ಒಳ್ಳೆಯತನ ಪ್ರತಿಫಲವಾಗಿದೆ ಇದೇ ರೀತಿಯಾಗಿ ಮುಂದಿನ ದಿನಮಾನಗಳ್ಲಲಿಯೂ ಸಾರ್ವಜನಿಕರ ಸಹಕಾರ ಹೀಗೆ ಮುಂದು ವರೆಯಲಿ’ ಎಂದು ಹೇಳಿದರು.

ಪಟ್ಟಣಪಂಚಾಯತಿಯಲ್ಲಿ ನೂತನ ಅಧ್ಯಕ್ಷೆ ರಾಜೇಶ್ವರಿ ತಿಪ್ಪಯ್ಯಸ್ವಾಮಿ ದ್ವಜಾರೋಹಣವನ್ನು ಮಾಡಿದರು, ಮುಖ್ಯಾಧಿಕಾರಿ ಜಸ್‌ಪಾಲ್ ಸಿಂಗ್, ಪಟ್ಟಣ ಪಂಚಾಯತಿ ಸದಸ್ಯರು,ಸಿಬ್ಬಂದಿಗಳು ಮತ್ತು ಪಟ್ಟಣದ ವಿವಿಧ ಸಂಘಟನೆಗಳ ಮುಖಂಡರು, ಗಣ್ಯಮಾನ್ಯರು ಉಪಸ್ಥಿತರಿದ್ದರು.
ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ ಮಂದಕಲ್ ದ್ವಜಾರೋಹಣ ಮಾಡಿದರು, ಎಸ್‌ಡಿಎಂಸಿ ಸದಸ್ಯರಾದ ಶಿವಲಿಂಗಪ್ಪಗೌಡ ಹುಸೇನಪುರ, ಮಾನ್‌ಸಿಂಗ್ ದಡೇದರ್, ರಮೇಶ್, ವೆಂಕಟೇಶ, ಮುಖ್ಯಶಿಕ್ಷಕಿ ಮುಂಜುಳಾ ಅಂಗಡಿ, ಶಿಕ್ಷಕರಾದ ಸಿದ್ರಾಮೇಶ್, ಗಿರೀಶ್ ಅಂಗಡಿ, ಪ್ರಾಣೇಶ್ ಸೇರಿದಂತೆ ಇನ್ನಿತೆ ಶಿಕ್ಷಕ ಶಿಕ್ಷಕೀಯರು ಉಪಸ್ತಿತರಿದ್ದರು.
ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಭಾರಿ ಮುಖ್ಯಗುರು ರಾಯನಗೌಡ ದ್ವಜಾರೋಹಣ ಮಾಡಿದರು ಶಿಕ್ಷಕರಾದ ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು, ಸಮುದಾಯ ಆಸ್ಪತ್ರೆ, ಸರಕಾರಿ ಹಿರಿಯ ಪ್ರಾಥಮಿಕ ಕನ್ಯಾಶಾಲೆ, ಉನ್ನತೀಕರಿಸಿದ ಹಿರಿಯ ಪ್ರಾತಮಿಕ ಶಾಲೆ, ಮಾಡೆಲ್ ಶಾಲೆ, ನವಚೆತನ, ವಾಸವಿ ವಿದ್ಯಾವಿಕಾಸ ಆಂಗ್ಲ ಮಾದ್ಯಮ ಶಾಲೆ ಸೇರಿದಂತ ವಿವಿಧ ಸಹಕಾರಿ ಸಂಘ ಸಂಸ್ಥೆಗಳು ದ್ವಜಾರೋಹಣ ಮಾಡುವ ಮೂಲಕ ೭೭ನೇ ಗಣರಾಜ್ಯೋತ್ಸವಕ್ಕೆ ಮೆರಗು ನೀಡಿದ್ದಾರೆ.

Leave a Reply

Your email address will not be published. Required fields are marked *