ಸಿಂಧನೂರು: ಈ ಭಾಗದ ನೆಡೆದಾಡುವ ದೇವರು, ಪರಮ ಪೂಜ್ಯ ಲಿಂಗೈಕ್ಯ ಶ್ರೀ ಚನ್ನಬಸವೇಶ್ವರ ತಾತನವರ 43 ನೇ ವರ್ಷದ ಮಹಾರಥೊತ್ಸವದಲ್ಲಿ ಪಾಲ್ಗೊಂಡು ದಾಸೋಹಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನು ಖುದ್ದು ಪರಿಶೀಲಿಸಿದ ಶಾಸಕರಾದ ಹಂಪನಗೌಡ ಬಾದರ್ಲಿ.ದಾಸೋಹ ವ್ಯವಸ್ಥೆ ಸರಾಗವಾಗಿ ನಡೆಯುವಂತೆ ಅಗತ್ಯ ಸೂಚನೆಗಳನ್ನು ನೀಡಿದರು. ಭಕ್ತರ ಸೌಲಭ್ಯ, ಸ್ವಚ್ಛತೆ ಹಾಗೂ ವ್ಯವಸ್ಥೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿದ ಅವರು, ಮಹಾರಥೋತ್ಸವವು ಶಾಂತಿ ಮತ್ತು ಸೌಹಾರ್ದದಿಂದ ಯಶಸ್ವಿಯಾಗಿ ನಡೆಯಲಿ ಎಂದು ಆಶಿಸಿದರು.


