ಲಿಂಗಸಗೂರು, ಜ. 26 – ಪಟ್ಟಣದ ವಿವಿಧೆಡೆ “ಶಾಸಕರು ಕಾಣೆಯಾಗಿದ್ದಾರೆ” ಎಂಬ ಪೋಸ್ಟರ್‌ಗಳು ಅಂಟಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ವಿಷಯಕ್ಕೆ ಸಂಬಂಧಿಸಿದ ಶಾಸಕ ವಜ್ಜಲ ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಪತ್ರಕರ್ತರು ಪ್ರಶ್ನಿಸಿದಾಗ, “ನಾನು ಕಾಣೆಯಾಗಿಲ್ಲ. ಚಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ” ಶಾಸಕ ವಜ್ಜಲ ಸ್ಪಷ್ಟಪಡಿಸಿದರು. ಈ ಕುರಿತು ಮಾತನಾಡಿದ ಅವರು, ತಮ್ಮ ವಿರುದ್ದ ಅನಾವಶ್ಯಕ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಚಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಶಾಸಕ ವಜ್ವಲ ಅವರು ವೇದಿಕೆಯ ಮೇಲೆ ಉಪಸ್ಥಿತರಿರುವುದು ದೃಶ್ಯವಾಗುತ್ತಿದೆ.

‘ಜನಸೇವೆಗಾಗಿ ನಾನು ಸದಾ ಲಭ್ಯನಿದ್ದೇನೆ. ಯಾವ ಉದ್ದೇಶ ಕ್ಕಾಗಿ ಪೋಸ್ಟ‌ರ್ ಅಂಟಿ ಸಿದ್ದಾರೆ ಅವರಿಗೇನಾದರೋ ಸಮಸ್ಯೆಗಳಿದ್ದರೆ ಬಂದು ಭೇಟಿ ಮಾಡಿ ಕುಂದು ಕೊರೆತೆ ಗಳನ್ನು ಬಗೆಹರಿಸಿ ಕೊಳ್ಳಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಎಲ್ಲಾ ಹಳ್ಳಿಗಳಲ್ಲಿ ರಸ್ತೆ ಚರಂಡಿ ಕಾಮಗಾರಿಗಳು ನಡೆಯುತ್ತಿದ್ದು ಅವರ ಯಾವ ಉದ್ದೇಶ ದಿಂದ ಈ ರೀತಿಯಲ್ಲಿ ತಪ್ಪು ಮಾಹಿತಿ ಹರಡಲಾಗುತ್ತಿದೆ” ಎಂದು ಪೋಸ್ಟರ್ ಅಂಟಿಸಿ ದವರು ಹೇಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಲಿಂಗಸಗೂರ ಸಾರಿಗೆ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *