ತಾಳಿಕೋಟಿ: ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹಾಗೂ ನಿವೃತ್ತ ಶಿಕ್ಷಕರಾದ ಗುರುಸಂಗಪ್ಪ ಸಿದ್ರಾಮಪ್ಪ ಜಮ್ಮಲದಿನ್ನಿ ಇವರಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವಿಜಯಪುರ ಜಿಲ್ಲಾ ಘಟಕವು “ಬಸವರಾಜೇಂದ್ರ ಶ್ರೀ” ಪ್ರಶಸ್ತಿ ನೀಡಿ ಗೌರವಿಸಿದೆ. ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ಜನವರಿ 24ರಂದು ನಡೆದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಪ್ರಥಮ ಸಮ್ಮೇಳನದಲ್ಲಿ ಅವರಿಗೆ ಈ ಪ್ರಶಸ್ತಿ ಪ್ರಧಾನ ಮಾಡಲಾಯಿತು. ತಾಳಿಕೋಟಿ ತಾಲೂಕಿನ ಶರಣ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷರಾಗಿ ಅನುಪಮ ಸೇವೆಸಲ್ಲಿಸಿದ ಇವರಿಗೆ ಪರಿಷತ್ತಿನ ಕುರಿತು ಇರುವ ಅಪಾರ ಕಾಳಜಿ ಹಾಗೂ ಕ್ರಿಯಾಶೀಲತೆಯನ್ನು ಗುರುತಿಸಿ ಇದೀಗ ಈ ಪ್ರಶಸ್ತಿ ಹಾಗೂ 5,000 ನಗದು ಬಹುಮಾನವನ್ನು ನೀಡಲಾಗಿದೆ. ಕೃತಜ್ಞತೆ: ತಮಗೆ ಈ ಪ್ರಶಸ್ತಿ ಬಂದಿರುವುದಕ್ಕೆ ಪರಿಷತ್ತಿನ ಸದಸ್ಯರು ಹಾಗೂ ಬಸವಾಭಿಮಾನಿಗಳ ಸಹಕಾರವೇ ಕಾರಣವಾಗಿದ್ದು ಅವರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸಿ ಈ ಪ್ರಶಸ್ತಿಯನ್ನು ಸಮರ್ಪಿಸುತ್ತೇನೆ ಎಂದು ತಿಳಿಸಿದ ಜಮ್ಮಲದಿನ್ನಿ ಅವರು ತಮಗೆ ನೀಡಿದ ರೂ 5,000 ಗೌರವ ಧನವನ್ನು ಶರಣ ಸಾಹಿತ್ಯ ಪರಿಷತ್ತಿಗೆ ನೀಡುವುದಾಗಿ ತಿಳಿಸಿದ್ದಾರೆ. ಈ ಸಮಯದಲ್ಲಿ ಸಮ್ಮೇಳನದ ಅಧ್ಯಕ್ಷರಾದ ಪ.ಪೂ.ಶ್ರೀ ಡಾ.ವಿವೇಕಾನಂದ ದೇವರು, ಶರಣ ಸಾಹಿತ್ಯ ಪರಿಷತ್ತಿನ ತಾಲೂಕ ಘಟಕದ ಅಧ್ಯಕ್ಷ ಅಶೋಕ ಹಂಚಲಿ, ನ್ಯಾಯವಾದಿ ಗಂಗಾಧರ ಕಸ್ತೂರಿ, ಈರಣ್ಣ ಕಲಬುರ್ಗಿ, ಶಿವಲಿಂಗಪ್ಪ ಪಾಲ್ಕಿ, ಕದಳಿ ವೇದಿಕೆ ಅಧ್ಯಕ್ಷೆ ಉಮಾ ಘೀವಾರಿ,ಶೋಭಾ ಜಮ್ಮಲದಿನ್ನಿ, ಕಾಶಿನಾಥ ಸಜ್ಜನ, ಮಹಾಲಿಂಗೇಶ್ವರ ಪಟ್ಟಣಶೆಟ್ಟಿ, ಮುತ್ತಿತರರು ಇದ್ದರು.

Leave a Reply

Your email address will not be published. Required fields are marked *