ಕೊಲ್ಹಾರ: ಸಮಾಜ ಸೇವೆ, ಶಿಕ್ಷಣ ಕ್ಷೇತ್ರ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಅಪಾರ ಸೇವೆ ಸಲ್ಲಿಸುತ್ತಿರುವ ಧರ್ಮರತ್ನ ಡಾ. ಕೈಲಾಸನಾಥ ಶ್ರೀಗಳಿಗೆ 2025–26ನೇ ಸಾಲಿನ ಭಾರತ ಭೂಷಣ ಪ್ರಶಸ್ತಿ ಲಭಿಸಿರುವುದು ಸಮಸ್ತ ವಿದ್ಯಾಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.ಈ ಮಹತ್ವದ ಸಾಧನೆಯ ಹಿನ್ನೆಲೆಯಲ್ಲಿ ಕೊಲ್ಹಾರದ ಆಕ್ಸ್‌ಫರ್ಡ್ ಕಿರಿಯ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯ ವತಿಯಿಂದ ಹರ್ಷಾಚರಣೆ ನಡೆಸಿ, ಶ್ರೀಗಳಿಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಶಾಲೆಯ ಆಡಳಿತಾಧಿಕಾರಿ, ಶಾಲಾ ಸಿಬ್ಬಂದಿ ಹಾಗೂ ವೈಯಕ್ತಿಕವಾಗಿ ಸಹ ಶ್ರೀಗಳಿಗೆ ಗೌರವಪೂರ್ವಕವಾಗಿ ಶುಭಾಶಯಗಳನ್ನು ಕೋರಿದರು.ಈ ಸಂದರ್ಭದಲ್ಲಿ ಮಾತನಾಡಿದ ಆಕ್ಸ್ ಫರ್ಡ್ ಶಾಲೆಯ ಆಡಳಿತಾಧಿಕಾರಿಗಳು ರಾಜ್ ಅಹ್ಮದ್ ಫರಾಶ್,“ಕಳೆದ **ಹದಿನಾರು ವರ್ಷಗಳಿಂದ ಡಾ. ಕೈಲಾಸನಾಥ ಶ್ರೀಗಳ ಮಾರ್ಗದರ್ಶನ, ನೆರವು ಹಾಗೂ ಆಶೀರ್ವಾದ ನಮ್ಮ ಶಾಲೆಯ ಮೇಲೆ ನಿರಂತರವಾಗಿ ಇದೆ. ಅವರ ಸಹಕಾರದಿಂದಲೇ ಶಾಲೆ ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಆಶೀರ್ವಾದ ನಮ್ಮ ಸಂಸ್ಥೆಯ ಮೇಲೆ ಇರಲಿ” ಎಂದು ಆಶಯ ವ್ಯಕ್ತಪಡಿಸಿದರು.
ಶಿಕ್ಷಣ, ಸಮಾಜ ಸೇವೆ ಹಾಗೂ ಮಾನವೀಯ ಮೌಲ್ಯಗಳ ಬೆಳೆವಣಿಗೆಗೆ ಡಾ. ಕೈಲಾಸನಾಥ ಶ್ರೀಗಳ ಕೊಡುಗೆ ಅಪಾರವಾಗಿದ್ದು, ಅವರಿಗೆ ಲಭಿಸಿರುವ ಈ ಪ್ರಶಸ್ತಿ ಅವರ ಸೇವೆಗೆ ದೊರೆತ ಯೋಗ್ಯ ಗೌರವವಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ದೊರೆಯಲಿ ಎಂದು ಶಾಲಾ ವಲಯದವರು ಹಾರೈಸಿದರು. ಈ ಸಂತಸದ ಕ್ಷಣದಲ್ಲಿ ಶಾಲೆಯ ಮುಖ್ಯ ಗುರುಮಾತೆ ಗೋಸಿಯಬೇಗಂ ಪಕಾಲಿ, ಕಾರ್ಯದರ್ಶಿ ರಾಜ್ ಅಹ್ಮದ್ ಫರಾಶ್, ಶಿಕ್ಷಕಿಯರಾದ ಪಂಕಜಾ ಡಿ., ಸಂಗಮ್ಮ ಮಠ, ನೀಲಮ್ಮ ಬೀಡ್ಗೊಂಡ್, ರೇಣುಕಾ ಉಕಲಿ, ಕಾವೇರಿ ಯಡಹಳ್ಳಿ, ನೀಲಾ ನೆಬ್ಗೇರಿ, ಆಫ್ರೊಜಾ ಖಾನ್ ವಾಲೆ, ಮುನ್ನಾ ಅವಟಿ ಹಾಗೂ ಆಯಿಷಾ ಮುಲ್ಲಾ ಅವರುಗಳು ಡಾ. ಕೈಲಾಸನಾಥ ಶ್ರೀಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದರು.ಶ್ರೀ ಗಳಿಗೆ ಇನ್ನೂ ಹೆಚ್ಚು ಪ್ರಶಸ್ತಿಗಳು ಲಭಿಸಲಿ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.

Leave a Reply

Your email address will not be published. Required fields are marked *