ಸಮಾಜದಿಂದ ತಿರಸ್ಕೃತಗೊಂಡವರಿಗೆ ಬದುಕು ಕಟ್ಟಿಕೊಟ್ಟಿರುವ ಕಾರುಣ್ಯಾಶ್ರಮ ನಿಜವಾದ ಮಂದಿರ – ಗುರುನಾಥ ಕನ್ನಾರಿ ಕಮಾಂಡೆಂಟ
ಸಿಂಧನೂರು —ಧಾರವಾಡ ವಲಯದ ಪೊಲೀಸ್ ಇಲಾಖೆಯ ಕೆ. ಐ. ಎಸ್. ಎಫ್. ಕಮಾಂಡೆಂಟ್ ಅಧಿಕಾರಿಗಳಾದ ಗುರುನಾಥ ಕನ್ನಾರಿ ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮಕ್ಕೆ ಭೇಟಿ ನೀಡಿ ಆಶ್ರಮದ ಎಲ್ಲಾ ಕೋಣೆಗಳನ್ನು ವೀಕ್ಷಿಸಿ ವೃದ್ಧರು ಹಾಗೂ ವಯಸ್ಕರ ಬುದ್ಧಿಮಾಂದ್ಯರಿಗೆ ಹಣ್ಣು ಹಂಪಲುಗಳನ್ನು ವಿತರಿಸಿ ಆಶ್ರಮದ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಈ ಸಮಯದಲ್ಲಿ ಆಶ್ರಮದ ಸದಸ್ಯರಾದ ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಕರಡಕಲ್ ಅವರು ಗುರುನಾಥ ಕನ್ನಾರಿ ಅವರನ್ನು ಗೌರವಿಸಿ ಸನ್ಮಾನಿಸಿ ನೆನಪಿನ ಕಾಣಿಕೆಯನ್ನು ವಿತರಿಸಿದರು. ನಂತರ ಕಮಾಂಡೆಂಟ್ ಅಧಿಕಾರಿಗಳಾದ ಗುರುನಾಥ ಕನ್ನಾರಿ ಮಾತನಾಡಿ ಸಮಾಜದಿಂದ ತಿರಸ್ಕೃತಗೊಂಡವರಿಗೆ ಬದುಕು ಕಟ್ಟಿ ಕೊಟ್ಟಿರುವ ಕಾರುಣ್ಯಾಶ್ರಮ ನಿಜವಾದ ಮಂದಿರ ಮತ್ತು ವಿಶೇಷವಾಗಿ ಈ ಆಶ್ರಮದ ಚನ್ನಬಸಯ್ಯ ಸ್ವಾಮಿ ನಾನು ಬಾಲ್ಯ ಸ್ನೇಹಿತರಾಗಿದ್ದು ಇಂತಹ ಸೇವೆಗೆ ನನ್ನ ಸ್ನೇಹಿತ ಮುಂದಾಗಿರುವುದು ನಮ್ಮೆಲ್ಲಾ ಸ್ನೇಹಿತರಿಗೆ ಹೆಮ್ಮೆಯ ವಿಷಯವಾಗಿದೆ. ನಮ್ಮ ಈ ಕರುಣೆಯ ಕಾರುಣ್ಯ ಕುಟುಂಬದಲ್ಲಿ ನಾನು ಒಬ್ಬ ಸರಳ ಸಾಮಾನ್ಯ ಸದಸ್ಯನಾಗಿ ಸೇವೆ ಮಾಡುತ್ತೇನೆ. ವಳಬಳ್ಳಾರಿ ಲಿಂಗಕ್ಕೆ ಶ್ರೀ ಚನ್ನಬಸವ ಮಹಾಶಿವಯೋಗಿಗಳ ಆದರ್ಶದಂತೆ ಅವರ ಆಶೀರ್ವಾದದೊಂದಿಗೆ ಹುಟ್ಟಿಕೊಂಡಿರುವ ಈ ಕಾರುಣ್ಯ ಕುಟುಂಬ ಕರುನಾಡಿನ ಕರುಣೆಯ ಕುಟುಂಬವಾಗಿರುವುದು ನಮ್ಮ ಹರ ಗುರು ಚರಮೂರ್ತಿಗಳ ಪ್ರೀತಿಗೆ ಪಾತ್ರವಾಗಿದೆ. ನಮ್ಮ ಪೊಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳು ಕೂಡ ಈ ಸೇವೆಗೆ ಪ್ರೋತ್ಸಾಹಿಸುತ್ತಿರುವುದು ತುಂಬಾ ಸಂತೋಷದ ವಿಚಾರ ಮುಂದಿನ ದಿನಮಾನಗಳಲ್ಲಿ ನಾನು ಕಾರುಣ್ಯಾಶ್ರಮಕ್ಕೆ ನನ್ನಿಂದಾದಂತಹ ಅಳಿಲು ಸೇವೆ ಒದಗಿಸುತ್ತೇನೆ ಎಂದು ಭಾವನಾತ್ಮಕವಾಗಿ ಮಾತನಾಡಿದರು. ಈ ಸಮಯದಲ್ಲಿ ಚಿದಾನಂದಪ್ಪ ಕುರಿ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಬಳ್ಳಾರಿ. ರಂಗನಾಥ ಉಪನ್ಯಾಸಕರು ಮಸ್ಕಿ. ಮಲ್ಲಪ್ಪ ಶಿಕ್ಷಕರು. ಮುಕ್ಕಣ್ಣ ವಳಬಳ್ಳಾರಿ. ಮಲ್ಲಿಕಾರ್ಜುನ ಸ್ವಾಮಿ ಹಿರೇಮಠ ಸದಸ್ಯರು ಶ್ರೀಮಠ ಸೇವಾ ಟ್ರಸ್ಟ್. ಹಾಗೂ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ. ವೀರಭದ್ರಗೌಡ ಗಿಣಿವಾರ. ಬೀರಣ್ಣ ಯಲಗಲದಿನ್ನಿ. ಶರಣಪ್ಪ ನಾಯಕ ಕಸಬಾ ಲಿಂಗಸುಗೂರು. ಮಹೇಶ ಲಿಂಗಸೂಗೂರು ಆಶ್ರಮದ ಸಿಬ್ಬಂದಿಗಳಾದ ಸಿದ್ದಯ್ಯ ಸ್ವಾಮಿ ಮರಿಯಪ್ಪ ಅನೇಕರು ಉಪಸ್ಥಿತರಿದ್ದರು


