ತಾಳಿಕೋಟಿ: ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ತಾಲೂಕ ಘಟಕ, ತಾಳಿಕೋಟಿ ಸ್ಪೋರ್ಟ್ಸ್ ಆ್ಯಂಡ್ ರೀಕ್ರಿಯೇಷನ್ ಕ್ಲಬ್ ಇವರ ಸಹಯೋಗದಲ್ಲಿ ಇಂದು( ಜ.26) 77ನೇ ಗಣರಾಜ್ಯೋತ್ಸವದ ಅಂಗವಾಗಿ ಕನ್ನಡ ನಾಡು ನುಡಿ ಬಿಂಬಿಸುವ ನೃತ್ಯ ಸ್ಪರ್ಧೆ-2026 ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸನ್ಮಾನ ಸಮಾರಂಭ ನಡೆಯಲಿದೆ. ಪಟ್ಟಣದ ಶ್ರೀ ವಿಠಲ ಮಂದಿರ ಎದುರುಗಡೆಯ ಆವರಣದಲ್ಲಿ ಸಂಜೆ 6:00 ಘಂಟೆಗೆ ನಡೆಯಲಿರುವ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಖಾಸ್ಗತೇಶ್ವರ ವಿರಕ್ತಮಠದ ಶ್ರೀ ಸಿದ್ದಲಿಂಗ ದೇವರು ವಹಿಸಲಿದ್ದಾರೆ. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಬಸವರಾಜ ತಾಳಿಕೋಟಿ ಹಾಗೂ ಕರವೇ ಜಿಲ್ಲಾಧ್ಯಕ್ಷ ಶ್ರೀಶೈಲ ಮುಳಜಿ ಸಮಾರಂಭ ಉದ್ಘಾಟಿಸುವರು. ಕರವೇ ತಾಳಿಕೋಟಿ ಘಟಕಾಧ್ಯಕ್ಷ ರವೀಂದ್ರ ಕಟ್ಟಿಮನಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮುದ್ದೇಬಿಹಾಳ ಕ್ಷೇತ್ರ ಸಮನ್ವಯಾಧಿಕಾರಿ ಆರ್ ಬಿ ದಮ್ಮೂರಮಠ, ಭಾಜಪ ಜಿಲ್ಲಾ ಮಾಜಿ ಅಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ), ಕಾಂಗ್ರೆಸ್ ಮುಖಂಡ ಪ್ರಭುಗೌಡ ಮದರಕಲ್ಲ, ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಫಿಯೋನೆಕ್ಸ್ ಡೆವಲಪರ್ಸ್ ಮುಖ್ಯಸ್ಥ ಪರುಶರಾಮ ಮ.ಕಟ್ಟಿಮನಿ, ಶ್ರೀ ರಾಮನವಮಿ ಉತ್ಸವ ಸಮಿತಿ ಅಧ್ಯಕ್ಷ ಅಮೀತಸಿಂಗ್ ಮನಗೂಳಿ, ಬಿಜೆಪಿ ಯುವ ಮುಖಂಡ ಮಂಜುನಾಥ ಶೆಟ್ಟಿ, ಕಾಂಗ್ರೆಸ್ ಯುವ ಮುಖಂಡ ಸಂಗನಗೌಡ ಅಸ್ಕಿ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಸದಸ್ಯ ಗುರುರಾಜ ಮಾನೆ, ಅಲ್ಲಮಪ್ರಭು ಬ್ಯಾಂಕ್ ನಿರ್ದೇಶಕ ಈಶ್ವರ ಹೂಗಾರ, ಭಾರತ ಮಂಟಪ ಮಾಲೀಕ ಸಾಹಿಲ್ ಮುರಾಳ ಆಗಮಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *