ರಾಯಚೂರು : ರಾಜ್ಯದಲ್ಲಿ ಕಾಂಗ್ರೆಸ್ ಪದೇ ಪದೇ ಅಪರಾಧಗಳ ಸಂಖ್ಯೆ ಹೆಚ್ಚಾಗುತ್ತಿದೆ ಅನ್ನೋ ಆರೋಪ ಕೇಳಿಬರುತ್ತಾ ಇದೆ. ಇದೀಗ ಅಂತಹದ್ದೇ ನಟೋರಿಯಸ್ ವ್ಯಕ್ತಿಯನ್ನ ಪೊಲೀಸರು ಲಾಕ್ ಮಾಡಿ ಕಂಬಿ ಹಿಂದೆ ತಳ್ಳಿದ್ದಾರೆ. ರಾಜ್ಯದ 6 ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ಖತರ್ನಾಕ್ ಮನೆಗಳ್ಳನನ್ನು ಬಂಧಿಸುವಲ್ಲಿ ರಾಯಚೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ರಾಮಕೃಷ್ಣ ಅಲಿಯಾಸ್ ಗುಜ್ಜಲು ರಾಮಕೃಷ್ಣ ಬಂಧಿತ ಆರೋಪಿ ಆಗಿದ್ದು, ಈತ ಆಂಧ್ರಪ್ರದೇಶದ ಧರ್ಮಾವರಂ ಮೂಲದವನು.
ರಾಮಕೃಷ್ಣ ಅಲಿಯಾಸ್ ಗುಜ್ಜಲು ರಾಮಕೃಷ್ಣ ರಾಯಚೂರು, ಗೌರಿಬಿದನೂರು, ಹಿರಿಯೂರು & ಹಾವೇರಿ ಸೇರಿದಂತೆ ಗಂಗಾವತಿ ಹಾಗೂ ಶಿರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಾಕಷ್ಟು ಅಪರಾಧ ಎಸಗಿದ್ದ. ಮೋಸ್ಟ್ ವಾಂಟೆಂಡ್ ಮನೆಗಳ್ಳನಾಗಿದ್ದ ರಾಮಕೃಷ್ಣ ಮೊಬೈಲ್ ಬಳಸದೆಯೇ, ರೈಲು ಮೂಲಕ ಟಾರ್ಗೆಟ್ ಮಾಡಿದ್ದ ಸಿಟಿಗೆ ಹೋಗಿ ಬರುತ್ತಿದ್ದ, ಅಲ್ಲದೆ ಪ್ರಮುಖವಾಗಿ ಭಿಕ್ಷುಕನ ರೀತಿ ಏರಿಯಾ ಪೂರ್ತಿ ಓಡಾಡಿ ಮಾಹಿತಿ ಸಂಗ್ರಹ ಮಾಡಿ ಕಳ್ಳತನ ಮಾಡುತ್ತಿದ್ದ ಎಂಬ ಆರೋಪವನ್ನ ಮಾಡಲಾಗಿದೆ.
ನಟೋರಿಯಸ್ ಮನೆಗಳ್ಳನ ಬಗ್ಗೆ ಪೊಲೀಸರು ಕೂಡ ಸಿಕ್ಕಾಪಟ್ಟೆ ತಲೆಕೆಡಸಿಕೊಂಡು ವಿಚಾರಣೆ ನಡೆಸಿದ್ದು, ಇದೀಗ ರಾಮಕೃಷ್ಣ ಅಲಿಯಾಸ್ ಗುಜ್ಜಲು ರಾಮಕೃಷ್ಣ ಕಂಬಿ ಹಿಂದೆ ಬಿದ್ದಿದ್ದಾನೆ. ಬಂಧಿತ ರಾಮಕೃಷ್ಣನಿಂದ 36 ಲಕ್ಷ ಮೌಲ್ಯದ 315 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಹಾಗೇ ಮನೆಗಳ್ಳತನ ಬಳಿಕ ಚಿನ್ನಾಭರಣ ಖಾಸಗಿ ಬ್ಯಾಂಕ್‌ನಲ್ಲಿ ಅಡವಿಟ್ಟು ರಾಮಕೃಷ್ಣ ಹಣ ಪಡೆದಿದ್ದ. ಬಳಿಕ ಮತ್ತೆ ಕಳ್ಳತನ ಮಾಡಿಕೊಂಡು ಓಡಾಡುತ್ತಿದ್ದು, ರಾಯಚೂರು ನಗರದ ಎಲ್ಐಸಿ ಅಧಿಕಾರಿ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣದಲ್ಲೂ ಈತನ ಪಾತ್ರವಿದೆ ಎಂದು ಆರೋಪ ಮಾಡಲಾಗಿದೆ.

