ಲಿಂಗಸುಗೂರು : ಪಟ್ಟಣದ ಬಸವಸಾಗರ ಕ್ರಾಸ್‌ನಿಂದ ಗಡಿಯಾರ ವೃತ್ತದವರೆಗೆ ನಡೆದಿರುವ ಸಿಸಿ ರಸ್ತೆ ಕಾಮಗಾರಿಯನ್ನು ಶಾಸಕ ಮಾನಪ್ಪ ವಜ್ಜಲ್ ಶುಕ್ರವಾರ ಪರಿಶೀಲಿಸಿದರು.
ಗಡಿಯಾರ ವೃತ್ತದ ಮೂಲಕ ಸಾಗುವ ಎಲ್ಲಾ ರಸ್ತೆಗಳನ್ನು ಸಿಸಿ ಮಾಡಿಸಲಾಗುತ್ತಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ₹20 ಕೋಟಿ ಅನುದಾನ ಒದಗಿಸಿದ್ದೇನೆ.
ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದ್ದರಿಂದ ಕೆಲವಡೆ ಸಿಸಿ ರಸ್ತೆ ಕಾಮಗಾರಿ ಆರಂಭಿಸಿಲ್ಲ’ ಎಂದರು.
‘ಉತ್ತಮ ಗುಣಮಟ್ಟ ಕಾಪಾಡಿ ಶೀಘ್ರವಾಗಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಕೆ.ನಾಗಭೂಷಣ, ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್, ಭೀಮಣ್ಣ ಹಿರೇಮನಿ, ವೆಂಕನಗೌಡ ಗುಡದನಾಳ ಸೇರಿದಂತೆ ಅನೇಕರು ಇದ್ದರು.


