ಮಾನ್ವಿ. ತಾಲೂಕಿನ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಯುವಕರು ರಾಯಚೂರಿನ ಕೃಷಿ ವಿಶ್ವವಿದ್ಯಾನಿಲಯ ಮೈದಾನದಲ್ಲಿ ಅಗ್ನಿವೀರ್ ಸೇನಾ ನೇಮಕಾತಿಯಲ್ಲಿ ಎಲ್ಲಾ ವಿಭಾಗಗಳಲ್ಲಿ ಅರ್ಹತೆ ಪಡೆದು ಮೆರಿಟ್ ಲಿಸ್ಟ್ನಲ್ಲಿ ಆಯ್ಕೆಯಾಗಿದ್ದಾರೆ. ಮಾನ್ವಿ ತಾಲೂಕಿನ ಯುವಪ್ರತಿಭೆಗಳು 1 .ಮಹೇಶ್ ನಾಯಕ್ ತಂದೆ ಈರಣ್ಣ ಸಾದಾಪುರ 2.ವೀರಭದ್ರ ತಂದೆ ನಾಗಪ್ಪ ಸಾದಾಪುರ 3.ನಾಗರಾಜ್ ನಾಯಕ ತಂದೆ ಬಸವರಾಜ ಹರವಿ 4.ವೀರೇಶ್ ನಾಯಕ ತಂದೆ ಭಸ್ಮಾಸುರ ಕಪಗಲ್ 5.ವಿಜಯಕುಮಾರ್ ತಂದೆ ಸಣ್ಣ ತಿಮ್ಮಯ್ಯ ಗೊರ್ಕಲ್ 6.ತಾಯಣ್ಣ ತಂದೆ ಆದೆಪ್ಪ ಕುರಡಿ ಈ ಯುವಕರು ಭಾರತೀಯ ಸೇನೆಗೆ ಆಯ್ಕೆಯಾದದ್ದು ತಾಲೂಕಿನ ಗ್ರಾಮೀಣ ಜನತೆಗೆ ಹಾಗೂ ದೇಶಪ್ರೇಮಿಗಳಿಗೆ ಸಂತಸವಾಗಿದೆ. ಕಾರಣ ಈ ಎಲ್ಲಾ ಯುವಕರು ತಂದೆ ತಾಯಿ ಜೊತೆ ಜಮೀನುಗಳಲ್ಲಿ ಕೆಲಸ ಮಾಡುತ್ತಾ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಾ ಶರೀರವನ್ನು ತಮ್ಮ ಹತೋಟಿಯಲ್ಲಿಟ್ಟುಕೊಂಡು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ದೇಶ ಸೇವೆಗೆ ಸನ್ನದ್ಧರಾಗಿದ್ದಾರೆ ಈಗ ದೇಶ ಸೇವೆಗೆ ನೇಮಕವಾಗಿದ್ದಾರೆ ಇವರ ಅಪಾರ ಸೇವೆ ದೇಶಕ್ಕೆ ಇರಲೆಂದು ಖಾಸಗಿ ಕಾಲೇಜುಗಳ ಉಪನ್ಯಾಸಕರ ಸಂಘದ ತಾಲೂಕ ಅಧ್ಯಕ್ಷರಾದ ಆಂಜನೇಯ ನಸಲಾಪುರ ಅಭಿನಂದಿಸಿದ್ದಾರೆ.
ಮಾನ್ವಿ ತಾಲೂಕಿನ ಖಾಸಗಿ ಕಾಲೇಜಿನ ಉಪನ್ಯಾಸಕರು ಹಾಗೂ ಸರ್ಕಾರಿ ಕಾಲೇಜಿನ ಉಪನ್ಯಾಸಕರ ಮಾರ್ಗದರ್ಶನದಲ್ಲಿ ಈ ಯುವಕರು ಸೇನೆಗೆ ಆಯ್ಕೆಯಾದದ್ದು ಬಹಳ ಸಂತೋಷ ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರು ಹಾಗೂ ತಾಲೂಕಾಧ್ಯಕ್ಷರು ಕೇಂದ್ರೀಯ ಶಶಸ್ತ್ರ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿಸಂಘ ರಾಯಚೂರು ವಂದೇ ಮಾತರಂ ಯುವ ಸಂಘ ಮದ್ಲಾಪುರ ಹಾಗೂ ತಾಲೂಕಿನ ಸಮಸ್ತ ದೇಶಪ್ರೇಮಿಗಳು ಈ ಯುವಕರನ್ನು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *