”ತುಂಗಭದ್ರಾ ನದಿ ಕಲುಷಿತಗೊಳಿಸಿದ ಪರಿಣಾಮ ವಾರ್ಷಿಕ 3 ಕೋಟಿಗೂ ಅಧಿಕ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆದ್ದರಿಂದ, ನದಿ ರಕ್ಷಣೆಗಾಗಿ ಹಮ್ಮಿಕೊಂಡಿರುವ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಬೇಕು,” ಎಂದು ಸಿಂಧನೂರಿನ
ವಿವಿಧ ಕಾಲೇಜ್ ಗಳಲ್ಲಿ. ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು …ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ, ಪರ್ಯಾವರಣ ಟ್ರಸ್ಟ್ ಸಹಯೋಗದಲ್ಲಿ ನಡೆದಿರುವ ಅಭಿಯಾನದ ಕುರಿತು , “ಉತ್ತರ ಭಾರತದಲ್ಲಿ ಗಂಗಾನದಿ ಶುದ್ದೀಕರಣಕ್ಕಾಗಿ ಹೋರಾಟ ಮಾಡಲಾಗಿತ್ತು. ರಾಜ್ಯ ದಲ್ಲಿ ಕಾವೇರಿ, ತುಂಗಭದ್ರಾ ನದಿ ವಿಚಾರವಾಗಿ ಹೋರಾಟ ರೂಪಿಸುವ ಚಿಂತನೆ ನಡೆದಾಗ, ತುಂಗಭದ್ರಾನದಿಯನ್ನು ಆಯ್ಕೆಮಾಡಿಕೊಂಡಿದ್ದೇವೆ.

ನದಿಗೆ ಸಂಬಂಧಿಸಿದಂತೆ ಈಗಾಗಲೇ ಎರಡು ಹಂತದ ಹೋರಾಟ ಮಾಡಲಾಗಿದೆ. ಕಾರ್ಖಾನೆಗಳ ಕಲುಷಿತ ರಾಸಾಯನಿಕ, ನಗರೀಕರಣದಿಂದಾಗಿ ಕಲುಷಿತ ನೀರು ನದಿ ಸೇರುತ್ತಿದೆ. ಇದರಿಂದಾಗಿ ರೋಗದ ಪ್ರಮಾಣ ಹೆಚ್ಚುತ್ತಿದ್ದು, ಕುಡಿಯಲು ಹಾಗೂ ಸ್ನಾನಕ್ಕೂ ನೀರು ಬಳಕೆಗೆ ಯೋಗ್ಯವಲ್ಲ ಎಂಬ ವರದಿಗಳು ಬಂದಿವೆ. ಮುಂದಿನ ದಿನಗಳಲ್ಲಿ ವ್ಯವಸಾಯಕ್ಕೂ ನೀರಿನ ಸಮಸ್ಯೆ ಉಂಟಾಗುವ

ಲಕ್ಷಣಗಳು ಇರುವುದರಿಂದ ಈಗಿನಿಂದಲೇ ಜನರು ಎಚ್ಚೆತ್ತುಕೊಳ್ಳಬೇಕು. ತುಂಗಭದ್ರಾ ನದಿಗೆ ಸೇರುವ ಕೊಳಚೆ ನೀರನ್ನು ಸಂಸ್ಕರಿಸಿ ಕೃಷಿಗೆ ಬಿಡುವುದು, ನದಿಗೆ ಕಸ, ತ್ಯಾಜ್ಯ ಎಸೆಯದೇ ಇರುವುದು, ನದಿ ಪಾತ್ರದಲ್ಲಿ ಬಟ್ಟೆ ತೊಳೆಯಲು ಕಟ್ಟೆಗಳನ್ನು ನಿರ್ಮಿಸು ವುದು, ಅವೈಜ್ಞಾನಿಕ ಮರಳುಗಾರಿಕೆ ತಡೆಗಟ್ಟುವುದು ಸೇರಿ ನಾನಾ ಉಪಕ್ರಮಗಳ ಮೂಲಕ ನದಿ ಸ್ವಚ್ಛವಾಗಿ ಇರಿಸಲು ಗಮನಹರಿಸಬೇಕು. ಈಗಾಗಲೇ ಶಿವಮೊಗ್ಗ, ಹರಿಹರದಿಂದ ಪಾದಯಾತ್ರೆ ಅಭಿಯಾನ ಮುಗಿದಿದೆ. 3ನೇ ಹಂತದ ಪಾದಯಾತ್ರೆ ಗಂಗಾವತಿ ಯಿಂದ ಡಿ.27ಕ್ಕೆ ಆರಂಭಗೊಂಡು, ಜ.4ರಂದು

ಮಂತ್ರಾಲಯದಲ್ಲಿ ಸಮಾರೋಪಗೊಳ್ಳಲಿದೆ. ಮಂತ್ರಾಲಯವರೆಗೆ ಪಾದಯಾತ್ರೆ ನಡೆಸಲಾ ಗುವುದು. ಹೋರಾಟ ಕುರಿತು ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಲಾಗುವುದು,”ಎಂದರು.
ಎಲ್ಲರೂ ಪಾದಯಾತ್ರೆಗಳನ್ನು ಬೆಂಬಲಿಸಬೇಕು ಎಂದು ತಿಳಿಸಿದರು…
ಈ ಕಾರ್ಯಕ್ರಮದಲ್ಲಿ
ರಾಷ್ಟ್ರೀಯ ಸ್ವಾಭಿಮಾನ ಅಂದೋಲನ.. ನವದೆಹಲಿ.. ದಕ್ಷಿಣ ಪ್ರಾಂತ ಸಂಚಾಲಕರು.ಸಿ ಪಿ ಮಾಧವನ್, ಕರ್ನಾಟಕ ದ ಸಂಚಾಲಕರು..*ಎಸ್.ಬಾಲಕೃಷ್ಣ ನಾಯ್ಡು
ಶಿವಮೊಗ್ಗ ಜಿಲ್ಲೆಯ ಸಂಚಾಲಕರು.. ಲೋಕೇಶ್ವರಪ್ಪ ಎಸ್ ಮ್.
ಬಳ್ಳಾರಿಯ ಬಿ ರಾಮಕೃಷ್ಣ ರವರು. ಸಿಂದನೋರಿನ ಸಲಹಾ ಸಮಿತಿ ಸದಸ್ಯರು *ಮಲ್ಲನಗೌಡ್ರು ಮತ್ತು ವೀರೇಶ್ ವಕೀಲರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *