ತಾಳಿಕೋಟಿ: ದೇವರ ಹಿಪ್ಪರಗಿ ಮತಕ್ಷೇತ್ರದ ಬಿಜೆಪಿ ಮುಖಂಡ ಬಸನಗೌಡ ಪಾಟೀಲ (ಯಡಿಯಾಪೂರ) ಇವರ ವತಿಯಿಂದ ತಾಲೂಕಿನ ಮಾಜಿ ಸೈನಿಕರಿಗೆ ಪ್ರವಾಸಿ ಮಂದಿರದಲ್ಲಿ ಶನಿವಾರ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಸನಗೌಡ ಎಡಿಯಾಪೂರ ಅವರು ಮಾತನಾಡಿ ತಮ್ಮ ಜೀವವನ್ನು ಪಣಕ್ಕಿಟ್ಟು ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸಿದ ನಮ್ಮ ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಇಂತಹ ಅವಕಾಶ ನನಗೆ ಸಿಕ್ಕಿರುವುದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ.ನಾನು ನನ್ನ ಜೀವನದಲ್ಲಿ ಈ ಹಂತಕ್ಕೆ ಬರಬೇಕಾದರೆ ಒಬ್ಬನಿವೃತ್ತ ಯೋಧರ ಒಳ್ಳೆಯ ಮಾರ್ಗದರ್ಶನವೇ ಕಾರಣ ಅವರನ್ನು ನಾನೆಂದೂ ಮರೆಯುವುದಿಲ್ಲ ಎಂದ ಅವರು ಇವತ್ತು ಈ ತಾಲೂಕಿನ ನಿವೃತ್ತಿ ಯೋಧರಿಗೆ ಸನ್ಮಾನಿಸುವ ಕಾರ್ಯ ಮಾಡಿದ್ದೇನೆ ಅವರು ನಿವೃತ್ತಿಯ ನಂತರವೂ ತಮ್ಮನ್ನು ವಿವಿಧ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಸಂತೋಷದ ವಿಷಯ. ನಾನು ಮಾಡುವ ಎಲ್ಲಾ ಒಳ್ಳೆಯ ಕಾರ್ಯಗಳಲ್ಲಿ ನಿಮ್ಮೆಲ್ಲರ ಸಹಕಾರ ನನ್ನೊಂದಿಗೆ ಇರಲಿ ನಿಮ್ಮ ಮಾರ್ಗದರ್ಶನದಲ್ಲಿ ನಾನು ಕೆಲಸ ಮಾಡುತ್ತೇನೆ ಎಂದರು. ನಿವೃತ್ತ ಸೈನಿಕರಾದ ರಾಮನಗೌಡ ಬಿರಾದಾರ (ಗೊಟಖಂಡಕಿ) ಹಾಗೂ ಶಾಂತಗೌಡ ಬಿರಾದಾರ ಮಾತನಾಡಿ ನಮ್ಮ ಸೇವೆಯನ್ನು ಗುರುತಿಸಿ ಗೌರವಿಸಿದ್ದಕ್ಕಾಗಿ ಮುಖಂಡ ಬಸನಗೌಡರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ದೇಶದ ರಕ್ಷಣೆಗಾಗಿ ಪ್ರತಿ ಕುಟುಂಬದ ಒಬ್ಬ ಸದಸ್ಯನನ್ನು ಕೊಡಲು ಇವತ್ತು ಸಮಾಜ ಮುಂದಾಗಬೇಕಾಗಿದೆ. ಬಸನಗೌಡ ಎಡಿಯಾಪೂರ ಅವರ ಎಲ್ಲ ಒಳ್ಳೆಯ ಕಾರ್ಯಗಳಲ್ಲಿ ನಮ್ಮ ಸಂಘವು ಸಹಕರಿಸುತ್ತದೆ ಎಂದರು. ಸಮಾಜ ಸೇವಕ ಶರಣಗೌಡ ಪಾಟೀಲ(ಕರಿಭಾವಿ) ಪ್ರಸ್ತಾವಿಕವಾಗಿ ಮಾತನಾಡಿ ಭಾರತದಂತಹ ದೇಶದಲ್ಲಿ ಹುಟ್ಟಿದ ನಾವೆಲ್ಲರೂ ಪುಣ್ಯವಂತರು ದೇಶದ ರಕ್ಷಣೆ ಮತ್ತು ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಅದು ಯಾರ ಭಾಗ್ಯದಲ್ಲಿದಿಯೋ ಅವರಿಗೆ ಸಿಗುತ್ತದೆ ಇದೊಂದು ಅತ್ಯಂತ ಅವಿಸ್ಮರಣೀಯ ವಾದ ಕಾರ್ಯಕ್ರಮವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘ(ರಿ)ಅಧ್ಯಕ್ಷ ಶ್ರೀಪಾಲ ಸಂಗಮಿ, ಗೌರವ ಅಧ್ಯಕ್ಷ ನಾನಾಗೌಡ ಬಿರಾದಾರ, ಶಂಕರಗೌಡ ನರಸಲಗಿ, ವೀರಗಂಟೆಪ್ಪ ತಳ್ಳೊಳ್ಳಿ, ಎಸ್ ಬಿ ಸಜ್ಜನ, ಬಿ.ಎಸ್.ಮುಲ್ಲಾ, ನಾಗರಾಜ ಮೇಟಿ, ಶಿವಪ್ಪ ಅಂಗಡಿ, ನೀಲಪ್ಪ ವಾಲಿ, ಎಸ್ ಕೆ ತೆಗ್ಗಿನಮನಿ, ಸೋಮನಗೌಡ ಪಾಟೀಲ, ಬಾಪುಗೌಡ ಪಾಟಿಲ, ಬಂಟನೂರ, ಗಣ್ಯರಾದ ಕೆ.ಸಿ.ದೇಸಾಯಿ ಶಳ್ಳಗಿ, ವಿಶ್ವನಾಥರೆಡ್ಡಿ ಪಾಟೀಲ ಲಕ್ಕುಂಡಿ,ಗುತ್ತಿಗೆದಾರ ಕೆ.ಶ್ರೀನಿವಾಸರೆಡ್ಡಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *