ಲಿಂಗಸುಗೂರು : ನವಲಿ ಗ್ರಾಮದಲ್ಲಿ ಕಾರ್ತಿಕ ಮಾಸ ದೀಪ ಬೆಳಗುವ ಮಾಸ. ಕರ್ನಾಟಕದಾದ್ಯಂತ ಹಿಂದೂ ದೇವಾಲಯಗಳಲ್ಲಿ ಕಾರ್ತಿಕ ದೀಪೋತ್ಸವ ಆಚರಣೆ ಭಕ್ತಿ. ಸಂಭ್ರಮದಿಂದ ನಡೆಯುತ್ತದೆ ದೀಪೋತ್ಸವದಿಂದ ಐಶ್ವರ್ಯ. ಸಂಪತ್ತು ಆರೋಗ್ಯ ಭಾಗ್ಯ ಪ್ರಾಪ್ತಿಯಾಗುತ್ತದೆ. ನಮ್ಮ ಬಣಗಾರ ಸಿಂಪಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸುಕ್ಷೇತ್ರ ನವಲಿ ಜಡೆಯ ಶಂಕರನ ದೇವಸ್ಥಾನಕ್ಕೆ ಆಗಮಿಸಿ ಪ್ರತಿ ಅಮಾವಾಸ್ಯೆ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಬೇಕೆಂದು. ಅಧ್ಯಕ್ಷರು ಬಣಗಾರ ಸಮಾಜ ಬೆಂಗಳೂರು ಚೆನ್ನಪ್ಪ ಹರಸೂರ ಮಸ್ಕಿ ಹೇಳಿದರು.
ತಾಲೂಕಿನ ಸುಕ್ಷೇತ್ರ ಶ್ರೀ ಜಡೆಯ ಶಂಕರಲಿಂಗ ದೇವಸ್ಥಾನದಲ್ಲಿ ಛೆಟ್ಟಿ ಅಮಾವಾಸ್ಯೆ ಅಂಗವಾಗಿ ವಿಶೇಷ ಪೂಜೆ ಹಾಗೂ ಅನ್ನದಾಸೋಹ ಮತ್ತು ಕಾರ್ತಿಕ ದೀಪೋತ್ಸವ ಬಣಗಾರ ಸಿಂಪಿ ಸಮಾಜದ ದಾಸೋಹ ಸಂಘಟಕರು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಕಾರ್ತಿಕ ದೀಪೋತ್ಸವವು ಭಕ್ತಿ. ಧ್ಯಾನ ಮತ್ತು ಆತ್ಮಜ್ಞಾನದ ಕಡೆಗೆ ಸಾಗಲು ಪ್ರೆರೆಪಿಸುವ ಆಧ್ಯಾತ್ಮಿಕ ಮಹತ್ವದ ಹಬ್ಬವಾಗಿದೆ. ಭಾರತೀಯರು ವಸು ದೈವ ಕುಟುಂಬಂ ಎಂಬ ದ್ಯೇಯ ವಾಕ್ಯದಲ್ಲಿ ಸಂಪೂರ್ಣವಾಗಿ ನಂಬಿಕೆಯನ್ನುಟ್ಟುಕೊಂಡವರು ಶ್ರದ್ಧೆ ಮತ್ತು ಭಕ್ತಿಗಳಿಗೆ ಹೆಸರಾದ ಭಾರತೀಯ ಸಂಪ್ರದಾಯವನ್ನು ಇನ್ನಷ್ಟು ಗಟ್ಟಿಗೊಳಿಸಲು ಇಂತಹ ಕಾರ್ಯಕ್ರಮಗಳು ಅಗತ್ಯ. ಬಣಗಾರ್ ಸಿಂಪಿ ಸಮಾಜದ ಎಲ್ಲಾ ಊರಿನ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಜಡೆಯ ಶಂಕರಲಿಂಗ ದೇವಸ್ಥಾನಕ್ಕೆ ಆಗಮಿಸಬೇಕೆಂದು. ಬಣಗಾರ್ ಸಿಂಪಿ ಸಮಾಜದ ಯುವ ಮುಖಂಡರು ವಸಂತ ಕುಮಾರ್ ಬಣಗಾರ್ ಸುರಪುರ ಹೇಳಿದರು. ಸುಮಾರು 400ಕ್ಕೂ ಹೆಚ್ಚು ಸದ್ಭಕ್ತರು ಅನ್ನದಾಸೋಹ ಪ್ರಸಾದ ಸ್ವೀಕರಿಸಿದರು. ಈ ಛೆಟ್ಟಿ ಅಮಾವಾಸ್ಯೆಯ ದಾಸೋಹ ಸೇವೆಯನ್ನು ಅಶೋಕ್. ಚಂದ್ರಶೇಖರ್. ಶಶಿಧರ್. ವಿಜಯಕುಮಾರ್. ರಾಜಶೇಖರ್. ಯಾಗಂಟಿ ಕುಟುಂಬದವರಿಂದ ಹಮ್ಮಿಕೊಳ್ಳಲಾಗಿತ್ತು. ಯಾಗಂಟಿ ಕುಟುಂಬದವರನ್ನು. ಅನ್ನದಾಸೋಹ ಸಂಘಟಕರು ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಲ್ಲಯ್ಯ ಸ್ವಾಮಿ ವಸ್ತ್ರದ. ಶ್ರೀಧರ್ ಮಸ್ಕಿ ಸಾಹಿತಿಗಳು. ಶಂಕರಲಿಂಗಪ್ಪ ಧನ ಶೆಟ್ಟಿ. ವಾಯ್ ಚಳ್ಳಿಮರದ್ ಪಂಚಾಕ್ಷರಿ ಹಿರೇಮಠ್ ಬಸವರಾಜ್ ಹಣಿಮೇಶ್ ಹೂಗಾರ್ ಸಂಕೇತ ಶಿವಪುತ್ರ ಯಾಗಂಟಿ ಭಾರತಿ ಜ್ಯೋತಿಬಸವರಾಜ್ ಹನಮೇಶ್ ಹೂಗಾರ್ ಸಂಕೇತ ಶಿವಪುತ್ರ ಯಾಗಂಟಿ ಭಾರತಿ ಜ್ಯೋತಿ ಮಹಾನಂದ ಶಿಲ್ಪ ಜಯಶ್ರೀ ಯಗಂಟಿ ಇನ್ನು ಹೆಚ್ಚಿನಲ್ಲಿ ನವಲಿ ಸುತ್ತಮುತ್ತಲಿನ ಸದ್ಭಕ್ತರು ಆಗಮಿಸಿದ್ದರು. ಶ್ರೀ ಜಡೇಶಂಕರಲಿಂಗ ದೇವರ ಕೃಪೆಗೆ ಪಾತ್ರರಾದರು.

